ಸಹಪಾಠಿ ಬಾಲಕಿಯೊಂದಿಗೆ ಮಾತನಾಡಿರುವುದಕ್ಕೆ 12ನೇ ತರಗತಿ ವಿದ್ಯಾರ್ಥಿಗೆ ಹಿರಿಯ ವಿದ್ಯಾರ್ಥಿ ಹಲ್ಲೆ ನಡೆಸಿ, ಆತನ ಬೆರಳು ಕತ್ತರಿಸಿದ ಘಟನೆ ದೆಹಲಿಯ ದ್ವಾರಕಾ ದಕ್ಷಿಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಅ.21ರಂದು ನಡೆಡಿದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ತೀವ್ರ ಭೀತಿಗೊಂಡಿದ್ದ. ಆದುದರಿಂದ ಆತ ಹಿರಿಯ ವಿದ್ಯಾರ್ಥಿಯಿಂದ ತನ್ನ ಮೇಲೆ ನಡೆದ ಹಲ್ಲೆಯನ್ನು ಪೋಷಕರಿಗೆ ತಿಳಿಸಿರಲಿಲ್ಲ. ಮೋಟಾರು ಸೈಕಲ್ ಚೈನ್ ನಿಂದ ತನ್ನ ಬೆರಳು ತುಂಡಾಗಿದೆ ಎಂದು ಆತ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಶುಕ್ರವಾರ ನಡೆದ ಘಟನೆಯನ್ನು ಮನೆಯಲ್ಲಿ ಹೇಳಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.