ಕೋರ್ಟ್ ಆವರಣದಲ್ಲಿ ವಕೀಲರುಗಳ ನಡುವೆ ನಡೆದ ಹೊಡೆದಾಟದ ವಿಡಿಯೋ ವೈರಲ್ ಆಗಿದೆ.
ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಭದ್ರತಾ ಸಿಬ್ಬಂದಿಗಳ ಎದುರೇ ಈ ಘಟನೆ ನಡೆದಿದೆ.
ಈ ಕುರಿತು ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಇಬ್ಬರು ವಕೀಲರು ಒಂದು ಕಡೆ ಜಗಳವಾಡುತ್ತಿದ್ದರು.ಸ್ವಲ್ಪ ಹೊತ್ತಲ್ಲೇ ಒಬ್ಬ ವಕೀಲ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.ಇದರ ಜೊತೆ ಕೆಲ ವಕೀಲರು ಹೊಡೆದಾಡುವುದು ಸೆರೆಯಾಗಿದೆ.
ವಕೀಲರ ಹೊಡೆದಾಟದ ಬಗ್ಗೆ ಜನರು ವಿಬಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.