ದುಬೈಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ, ಅಲರ್ಟ್ ಆದ ಸಿಬ್ಬಂದಿಗಳು

ದುಬೈಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ, ಅಲರ್ಟ್ ಆದ ಸಿಬ್ಬಂದಿಗಳು

ಚೆನ್ನೈ;ಚೆನ್ನೈನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಬಗ್ಗೆ ವರದಿಯಾಗಿದೆ.

ಸುಮಾರು 160ಮಂದಿ ಪ್ರಯಾಣಿಕರಿದ್ದ ಇಂದು ವಿಮಾನವು ಬೆಳಿಗ್ಗೆ 7.20ಕ್ಕೆ ಚೆನ್ನೈಯಿಂದ ದುಬೈಗೆ ಟೇಕಫ್ ಗೆ ಸಿದ್ದವಾಗಿತ್ತು.ಈ ವೇಳೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ಬೆದರಿಕೆ ಕರೆ ಬಂದಿದೆ.

ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣ ಪೊಲೀಸರು ಕಾರ್ಯಾಚರಣೆಗಿಳಿದಿದ್ದು,ವಿಮಾನದೊಳಗೆ ಪರಿಶೀಲನೆ ನಡೆಸಿದ್ದಾರೆ.

ಇದೀಗ ಕರೆ ಬಂದ ಮೂಲದ ಪತ್ತೆಗೆ ತನಿಖೆ ನಡೆಯುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್