ದುಬೈನಿಂದ ಪ್ರಿಯಕರನ ಭೇಟಿಗೆ ಬೆಂಗಳೂರಿಗೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು

ಬೆಂಗಳೂರು;ದುಬೈನಿಂದ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಯುವತಿ ಅಪಾರ್ಟ್‌ ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಿನ್ನೆ ಕೋರಮಂಗಲದಲ್ಲಿ ನಡೆದಿದೆ.

ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್​ ನ ನಾಲ್ಕನೇ ಮಹಡಿಯಿಂದ ಬಿದ್ದು ಹಿಮಾಚಲ‌ ಮೂಲದ ಅರ್ಚನಾ(28) ಸಾವನ್ನಪ್ಪಿದ್ದಾರೆ.

ದುಬೈನ ಖಾಸಗಿ ಏರ್​​ ಲೈನ್ಸ್​​ನಲ್ಲಿ ಕೆಲಸ ಮಾಡಿಕೊಂಡಿದ್ದ ಅರ್ಚನಾ ಕೋರಮಂಗಲದಲ್ಲಿರುವ ಗೆಳೆಯನ ಭೇಟಿಗೆ ಬಂದಿದ್ದರು.ಅರ್ಚನಾ ಗೆಳೆಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ.

ಮಧ್ಯರಾತ್ರಿ 12 ಗಂಟೆಗೆ ಅರ್ಚನಾ ಧೀಮನ್ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.ಶವವನ್ನು ಸೇಂಟ್ ಜಾನ್ಸ್​ ಆಸ್ಪತ್ರೆಯಲ್ಲಿರಿಸಲಾಗಿದೆ‌.

ಅರ್ಚನಾ ಸಾವಿನ ಬಳಿಕ ಆಕೆಯ ಗೆಳೆಯ ಕೇರಳ ಮೂಲದ ಆದೀಶ್ ಸುತ್ತ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅರ್ಚನಾ ಮತ್ತು ಆದೀಶ್ ಪ್ರೀತಿಸುತ್ತಿದ್ದು ಗೆಳೆಯನ ಭೇಟಿಗೆ ಬಂದ ಅರ್ಚನಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ನಡೆದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.ಪೊಲೀಸರು ಸಿಸಿಟಿವಿ ದೃಶ್ಯ‌ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com