ದುಬೈ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಪ್ರಚಾರದ ಡ್ರಾನಲ್ಲಿ ಭಾರತೀಯ ವ್ಯಕ್ತಿ 1ಮಿಲಿಯನ್ ಯುಎಸ್ ಡಾಲರ್ ಬಹುಮಾನ ಗೆದ್ದುಕೊಂಡಿದ್ದಾರೆ.
ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದವರಾದ 45 ವರ್ಷದ ಕರ್ಣಯ್ಯ ಮಂಡೊಲ್ಲ ಅವರು ದುಬೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಅವರು ಮಿಲೇನಿಯಂ ಮಿಲಿಯನೇರ್ ಲಾಟರಿಯಲ್ಲಿ 1 ಮಿಲಿಯನ್ ಗೆದ್ದಿದ್ದಾರೆ. ಅವರು ಅ.5
ರಂದು ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಿದ್ದರು.
ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಉಳಿಸಲಾಗುವುದು ಮತ್ತು ಸ್ವಲ್ಪ ಭಾಗವನ್ನು ಪರೋಪಕಾರಿ ಚಟುವಟಿಕೆಗಳಿಗೆ ಖರ್ಚು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
1999ರಿಂದ ಮಿಲೇನಿಯಮ್ ಮಿಲಿಯನೇರ್ ಪ್ರಚಾರದಲ್ಲಿ US1 ಮಿಲಿಯನ್ ಗಳಿಸಿದ 217ನೇ ಭಾರತೀಯ ಪ್ರಜೆ ಕರ್ಣಯ್ಯ ಅವರಾಗಿದ್ದಾರೆ.