ಮೈಸೂರು; ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ ಇಂದು ನಿಧನರಾಗಿದ್ದು ಕಾಂಗ್ರೆಸ್ ಸೇರಿದಂತೆ ಎಲ್ಲರಲ್ಲೂ ದುಃಖ ಉಂಟುಮಾಡಿದೆ.
ಇದೀಗ ಅವರ ಸಾವಿನ ಕುರಿತು ಮಾಹಿತಿ ಬಯಲಾಗಿದೆ. ಮನೆಯಲ್ಲಿ ರಕ್ತದ ವಾಂತಿಯಾಗಿ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಮೈಸೂರಿನ ಡಿಆರ್ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ಧ್ರುವ ನಾರಾಯಣ ಅವರಿಗೆ ಚಿಕಿತ್ಸೆ ನೀಡಿದ್ದ ಡಾ.ಮಂಜುನಾಥ್ ಅವರು ಮಾತನಾಡಿ,ಧ್ರುವ ನಾರಾಯಣ ಅವರು ನಮ್ಮ ಪಕ್ಕದ್ಮನೆಯಲ್ಲಿಯೇ ವಾಸವಾಗಿದ್ದಾರೆ. ಇಂದು ಬೆಳಗ್ಗೆ ಸುಮಾರು ಏಳು ಗಂಟೆಗೆ ಜಾಗಿಂಗ್ ಮುಗಿಸಿಕೊಂಡು ಬರುತ್ತಿರುವಾಗ ಜೋರಾಗಿ ಕೂಗಿ ಬೇಗ ಬನ್ನಿ ಎಂದು ಹೇಳಿದರು.ಅಲ್ಲಿ ಹೋಗಿ ನೋಡಿದಾಗ ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಅವರಿಗೆ ಆ ಸಮಯದಲ್ಲಿ ರಕ್ತದ ವಾಂತಿಯೂ ಆಗಿತ್ತು ಎಂದು ಹೇಳಿದ್ದಾರೆ.
ನಾವು ಅಲ್ಲಿಂದಲೇ ಸಿಪಿಆರ್ ಮಾಡುತ್ತಾ ನಗರದ ಡಿಆರ್ಎಂ ಆಸ್ಪತ್ರೆಗೆ ಶಿಫ್ಟ್ ಮಾಡಿದೆವು.ಮನೆಯಲ್ಲಿಯೇ ಧ್ರುವ ನಾರಾಯಣ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೂ ಆಸ್ಪತ್ರೆಯಲ್ಲಿ 25 ಬಾರಿ ಸಿಪಿಆರ್ ಮಾಡಲಾಯ್ತು. ಅವರು ಸ್ಪಂದಿಸಿಲ್ಲ ಎಂದು ಡಾ.ಮಂಜುನಾಥ್ ಹೇಳಿದ್ದಾರೆ.