ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸಲು ಮುಂದಾದ ಇಂಜಿನಿಯರ್ ಕರ್ತವ್ಯದಿಂದ ಅಮಾನತು

ನವದೆಹಲಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸಲು ಬಂದ ಸರ್ಕಾರಿ ಇಂಜಿನಿಯರ್ ಗೆ ಭದ್ರತಾ ನೀತಿ ಉಲ್ಲಂಘನೆ ಹಿನ್ನೆಲೆ ಅಮಾನತು ಮಾಡಲಾಗಿದೆ‌

ಭದ್ರತಾ ಪ್ರೋಟೋಕಾಲ್​ ಉಲ್ಲಂಘಿಸಿದ ಕಾರಣಕ್ಕೆ ಇಂಜಿನಿಯರ್​ ಅಂಬಾ ಸಿಯಾಲ್​ ಅವರನ್ನು ಅಮಾನತುಗೊಳಿಸಲಾಗಿದೆ.

ಜ.4ರಂದು ದ್ರೌಪದಿ ಮುರ್ಮು ಅವರು ರೋಹೆತ್​ನಲ್ಲಿ ನಡೆದ ಸ್ಕೌಟ್​ ಗೈಡ್​​ ಜಾಂಬೋರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅಂಬಾ ಸಿಯಾಲ್​ ಅವರು ದ್ರೌಪದಿ ಮರ್ಮು ಅವರನ್ನು ಕಂಡು ಪಾದ ಸ್ಪರ್ಶಿಸಲು ಮುಂದಾಗಿದ್ದರು.

ಭದ್ರತಾ ನಿಯಮ ಆಧರಿಸಿ ಇಂಜಿನಿಯರ್​ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.

ಟಾಪ್ ನ್ಯೂಸ್