40 ಜನರಿಗೆ ಕಚ್ಚಿ ಕೊನೆಯುಸಿರೆಳೆದ ರೇಬಿಸ್ ಸೋಂಕಿತ 2 ವರ್ಷದ ಬಾಲಕಿ; ಇಡೀ ಗ್ರಾಮದಲ್ಲಿ ಸೋಂಕು ಹರಡುವ ಭೀತಿ

40 ಜನರಿಗೆ ಕಚ್ಚಿ ಕೊನೆಯುಸಿರೆಳೆದ ರೇಬಿಸ್ ಸೋಂಕಿತ 2 ವರ್ಷದ ಬಾಲಕಿ; ಇಡೀ ಗ್ರಾಮದಲ್ಲಿ ಸೋಂಕು ಹರಡುವ ಭೀತಿ

ಉತ್ತರಪ್ರದೇಶ;ಬೀದಿ ನಾಯಿ ಕಚ್ಚಿ ರ್ಯಾಬಿಸ್ ರೋಗ ಹೊಂದಿದ್ದ ಬಾಲಕಿ ತನ್ನ ಕೊನೆಯುಸಿರಿನ‌ ಮೊದಲು 40 ಜನರಿಗೆ ಕಚ್ಚಿ ಗಾಯಗೊಳಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.




ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಕ್ಯೋಲಾರಿ ಗ್ರಾಮದ ಎರಡೂವರೆ ವರ್ಷದ ಬಾಲಕಿ ಬೀದಿ ನಾಯಿ ಕಚ್ಚಿ ಎರಡು ವಾರಗಳ ನಂತರ ಸೋಮವಾರ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಆಘಾತಕಾರಿ ಸಂಗತಿಯೆಂದರೆ, ಈ ಅವಧಿಯಲ್ಲಿ, ಬಾಲಕಿ ಸುಮಾರು 40 ಜನರಿಗೆ ಕಚ್ಚಿದ್ದು ಇದರಿಂದಾಗಿ ರೇಬಿಸ್ ಹರಡುವ ಸಾಧ್ಯತೆಯ ಬಗ್ಗೆ ಗ್ರಾಮಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಲಕಿಯು ಕ್ಯೋಲಾರಿ ಗ್ರಾಮದ ತನ್ನ ತಾಯಿಯ ಮಾವನ ಮನೆಯಲ್ಲಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದೆ, ಅಲ್ಲಿ ಬೀದಿ ನಾಯಿ ಕಚ್ಚಿದೆ. ಅರ್ಹ ವೈದ್ಯರಿಂದ ತಕ್ಷಣದ ವೈದ್ಯಕೀಯ ಆರೈಕೆಯನ್ನು ಪಡೆದಿಲ್ಲ. ಅವಳ ರೇಬೀಸ್ ರೋಗ ಲಕ್ಷಣಗಳನ್ನು ಕುಟುಂಬವು ನಿರ್ಲಕ್ಷಿಸಿದೆ ಎಂದು ವರದಿಯಾಗಿದೆ.

ಈ ಬಳಿಕ ಬಾಲಕಿ ಕೆಲವರಿಗೆ ಕಚ್ಚಿದ್ದಾಳೆ ಮತ್ತು ಇತರರನ್ನು ತನ್ನ ಉಗುರುಗಳಿಂದ ಪರಚಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕ್ಯೋಲಾರಿ ಗ್ರಾಮದಿಂದ 40ಕ್ಕೂ ಹೆಚ್ಚು ಮಂದಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ. ಆದರೆ, ನಮ್ಮಲ್ಲಿ ಸಾಕಷ್ಟು ರೇಬಿಸ್ ಚುಚ್ಚುಮದ್ದು ಲಭ್ಯವಿರುವುದರಿಂದ ಗಾಬರಿ ಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಉಸ್ತುವಾರಿ ದಿನೇಶ್ ಬರ್ದರಿಯಾ ಸುದ್ದಿಗಾರರಿಗೆ ತಿಳಿಸಿದರು.




ಟಾಪ್ ನ್ಯೂಸ್