ಇಂಜೆಕ್ಷನ್ ಪಡೆದ ಬಳಿಕ ಬಾಲಕ ಸಾವು, ವೈದ್ಯ ನಾಪತ್ತೆ

ವೈದ್ಯಕೀಯ ನಿರ್ಲ್ಯಕ್ಷದಿಂದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ಇಲ್ಲಿಯ ತೆಲಂಗಾಣ ನಾಂಪಲ್ಲಿ ಮಂಡಲ್‌ನಲ್ಲಿ ನಡೆದಿದೆ.

ಮಂಡಲದ ಜಾಂತಂಡ ಗ್ರಾಮದ ರಾಮಾವತ್ ರತ್ಯಾ ಸಾಲಿ ದಂಪತಿಯ ಪುತ್ರ ಜಸ್ವಾನ್(14) ಎರಡು ದಿನಗಳಿಂದ ಕೆಮ್ಮು ಮತ್ತು ನೆಗಡಿಯಿಂದ ಬಳಲುತ್ತಿದ್ದ. ಇದರಿಂದ ಆತನ ಅಜ್ಜ ಭಾನುವಾರ ಬೆಳಗ್ಗೆ ಮಂಡಲ ಕೇಂದ್ರದ ಶ್ರೀನಿವಾಸ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿದ್ದ ಆರ್ ಎಂಪಿ ಡಾ.ಕೃಷ್ಣ ಬಾಲಕನನ್ನು ಪರೀಕ್ಷಿಸಿ ಇಂಜೆಕ್ಷನ್ ನೀಡಿದ್ದು,ಆ ಬಳಿಕ ಬಾಲಕನಿಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದೆ.

ತಕ್ಷಣ ಬಾಲಕನನ್ನು ಕುಟುಂಬಸ್ಥರು ಚಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆಯಿಂದ ಕಂಗಾಲಾದ ಬಾಲಕನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.ಬಳಿಕ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದೇವರಕೊಂಡಕ್ಕೆ ಕೊಂಡೊಯ್ಯಲಾಗಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಬಳಿಕ ವೈದ್ಯ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್