ಬೆಂಗಳೂರು;ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದು ಕಳೆದ 8 ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.
ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕೆ ಪಟ್ಟುಹಿಡಿದಿದ್ದ ಡಿಕೆಶಿ, ಸಿಎಂ ಹುದ್ದೆಗೆ ಭಾರೀ ಕಸರತ್ತು ನಡೆಸಿದ್ದರು.ಇದೀಗ ಕೊನೆಗೆ ಡಿಸಿಎಂ ಹುದ್ದೆಗೆ ತೃಪ್ತಿಪಟ್ಟುಕೊಂಡಿದ್ದಾರೆ.ಪಟ್ಟು ಬಿಡದೆ ಸಿಎಂ ಹುದ್ದೆ ಮೇಲೆ ಹಠ ಹಿಡಿದಿದ್ದ ಡಿಕೆಶಿ ಕೊನೆಗೆ ಮೌನವಾಗಿದ್ದೇಕೆ ಎಂದು ಕೇಳಿದರೆ ಅದರ ಹಿಂದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇದ್ದಾರೆ ಎನ್ನಲಾಗಿದೆ.
ಡಿಕೆಶಿ ಅಂತಿಮವಾಗಿ ಸೋನಿಯಾ ಗಾಂಧಿ ಮಾತಿಗೆ ಕರಗಿ ಸಿಎಂ ರೇಸ್ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಅವರು ಡಿಕೆಶಿಗೆ, ಕರ್ನಾಟಕದ ಚುನಾವಣೆ ಗೆಲುವಿನಲ್ಲಿ ನಿಮ್ಮ ಪಾತ್ರ ಏನು ಎಂಬುದು ನಮಗೆ ತಿಳಿದಿದೆ. ನನ್ನ ಜವಾಬ್ದಾರಿಯನ್ನು ನಿಭಾಯಿಸಲು ನಾನು ಇಲ್ಲಿ ಕುಳಿತಿದ್ದೇನೆ.ನೀವು ನಮ್ಮನ್ನೂ ಅರ್ಥ ಮಾಡಿಕೊಳ್ಳಬೇಕು.ಮುಂದೆ ನಿಮಗೆ ಅನುಕೂಲವಾಗಲಿದೆ.
ನೀವು ಬಯಸಿದ ಸ್ಥಾನ ನಿಮಗೆ ಬರಲಿದೆ. ಈ ಬಾರಿ ಒಂದು ಅವಕಾಶ ಬಿಟ್ಟುಕೊಡಿ ಎಂದು ಸೋನಿಯಾ ಗಾಂಧಿ ಹೇಳಿದ್ದು, ಈ ಮಾತಿಗೆ ಕರಗಿದ ಡಿಕೆಶಿ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋನಿಯಾ ಗಾಂಧಿ ಅವರು ಸದ್ಯ ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದಾರೆ. ಕಳೆದ ಐದು ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ದೆಹಲಿಯಲ್ಲಿ ಶತಪ್ರಯತ್ನ ನಡೆಸಿದರು. ಅಂತಿಮವಾಗಿ ಇದರಲ್ಲಿ ಸಿದ್ದರಾಮಯ್ಯಗೆ ಗೆಲುವಾಗಿದೆ.