BREAKING ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಢಿಕ್ಕಿ

ಹೊಸಕೋಟೆ;ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಗೆ ಟೇಕಫ್ ವೇಳೆ ಹದ್ದು ಡಿಕ್ಕಿಯಾಗಿದೆ.

ಈ ವೇಳೆ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿದೆ. ಪೈಲೆಟ್ ಹರಸಾಹಸದಿಂದ ಭಾರಿ ಅನುಹುತ ತಪ್ಪಿದೆ. ಜಕ್ಕೂರು ಹೆಲಿಪ್ಯಾಡ್‌ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಜಕ್ಕೂರ್ ಹೆಲಿಪ್ಯಾಡ್‌ನಿಂದ ಟೇಕ್ ಆಫ್ ಆದೆ ಕೆಲ ಕ್ಷಣಗಳಲ್ಲೇ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿದೆ.ಹದ್ದು ಡಿಕ್ಕಿಯಾದ ರಭಸಕ್ಕೆ ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದೆ. ಡಿಕೆ ಶಿವಕುಮಾರ್ ಜೊತೆಗಿದ್ದ ಇತರ ಕೆಲವರಿಗೆ ಗಾಯಗಳಾಗಿದೆ. ಡಿಕೆ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್‌ ಗಾಜು ಪುಡಿ, ಪುಡಿ ಆಗುತ್ತಿದ್ದಂತೆ ಎಲ್ಲರಿಗೂ ಗಾಬರಿ ಆಗಿದೆ. ಕೊನೆಗೆ ಡಿಕೆ ಶಿವಕುಮಾರ್ ಅವರಿದ್ದ ಹೆಲಿಕಾಪ್ಟರ್‌ ಅನ್ನು HALನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ಘಟನೆಯಿಂದ ಹೆಲಿಕಾಪ್ಟರ್ ಪ್ರಯಾಣವನ್ನೇ ರದ್ದು ಮಾಡಿರುವ ಡಿಕೆ ಶಿವಕುಮಾರ್ ರಸ್ತೆ ಮೂಲಕ ಪ್ರಯಾಣ ಬೆಳೆಸಿದ್ದಾರೆ. ರಸ್ತೆ ಮೂಲಕ ಕೋಲಾರದ ಮುಳಬಾಗಿಲಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಪ್ರಚಾರಕ್ಕೆ ತೆರಳಿದ್ದಾರೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com