ಚಿತ್ರದುರ್ಗ; ಹಿರಿಯೂರು ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತ ಮಹಿಳೆಯೋರ್ವರು ಚೀಟಿ ನೀಡಿದ್ದು, ಅದನ್ನು ಅವರು ವೇದಿಕೆಯಲ್ಲೇ ಹರಿದು ಜೇಬಿಗೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ವೇದಿಕೆ ಮೇಲೆ ತೆರಳಿದ ಮಹಿಳೆಗೆ ಹಿಂದಿರುಗುವಂತೆ ಡಿಕೆಶಿ ಸೂಚನೆ ನೀಡುತ್ತಾರೆ. ಈ ವೇಳೆ ಚೀಟಿ ತೆಗೆದುಕೊಂಡ ಮಾಜಿ ಸಚಿವ ಸುಧಾಕರ್ ತೆಗೆದುಕೊಂಡು ನೋಡಿ ಡಿಕೆಶಿ ಅವರಿಗೆ ನೀಡುತ್ತಾರೆ.
ಚೀಟಿ ಪಡೆದು ನೋಡಿದ ಬಳಿಕ ಚೀಟಿ ಹರಿದು ಜೇಬಿನಲ್ಲಿಟ್ಟುಕೊಂಡಿದ್ದಾರೆ.ಈ ಚೀಟಿಯಲ್ಲಿ ಮಾಜಿ ಸಚಿವ ಸುಧಾಕರ್ ಗೆ ಟಿಕೆಟ್ ಘೋಷಿಸುವಂತೆ ಬರೆಯಲಾಗಿತ್ತು ಎಂದು ವರದಿ ತಿಳಿಸಿದೆ.