ಕಾಸರಗೋಡು:ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಡೂರಿನಲ್ಲಿ ನಡೆದಿದೆ.
ಅಡೂರು ಚಾಮಕೊಚ್ಚಿ ಅನ್ನಪ್ಪಾಡಿಯ ಮುದ್ದ ನಾಯ್ಕ್ ರವರ ಪುತ್ರಿ ದಿವ್ಯಾ (26) ಮೃತಪಟ್ಟವರು.ದಿವ್ಯಾ ಬಂದಡ್ಕದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ನಿನ್ನೆ ದಿವ್ಯಾ ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿವ್ಯಾ ಮಂಗಳವಾರ ರಾತ್ರಿ ಲ್ಯಾಬ್ ನಲ್ಲಿ ಕೆಲಸ ಮುಗಿಸಿ ಬುಧವಾರ ಬೆಳಿಗ್ಗೆ ಮನೆಗೆ ಬಂದಿದ್ದರು.
ತಾಯಿ ಹಾಗೂ ಮನೆ ಮಂದಿ ಹೊರಗಡೆ ತೆರಳಿದ್ದರು. ಸಂಜೆ ಸ್ಥಳೀಯರು ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ದಿವ್ಯಾಗೆ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ ಈ ವೇಳೆ ಅವರು ಮೃತಪಟ್ಟಿದ್ದರು.
ಸ್ಥಳದಲ್ಲಿ ದಿವ್ಯಾಳ ಆತ್ಮಹತ್ಯೆ ಪತ್ರ ಲಭಿಸಿದ್ದು ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಯುವಕನೋರ್ವನ ಕೇಂದ್ರೀಕರಿಸಿ ಆದೂರು ಪೊಲೀಸರು ತನಿಖೆ ಅರಂಭಿಸಿದ್ದಾರೆ ಎನ್ನಲಾಗಿದೆ.
ಯುವಕ ನಿರಂತರವಾಗಿ ಮೊಬೈಲ್ ನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.ಈ ಬಗ್ಗೆ ಆದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.