ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಆಂಧ್ರಪ್ರದೇಶದ ಧರ್ಮಾವರಂ ಪಟ್ಟಣದಲ್ಲಿ ನಡೆದಿದೆ.
ಧರ್ಮಾವರಂ ಪಟ್ಟಣದ ಮಾರುತಿ ನಗರದ ವಿನಾಯಕ ಮಂಟಪದ ಮುಂದೆ ಪ್ರಸಾದ್ (26) ಎಂಬ ಯುವಕ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ.
ಚೌತಿ ಹಬ್ಬದ ಹಿನ್ನೆಲೆ ಸ್ಥಳೀಯರು ಪ್ರಸಾದ್ ಅವರ ಮನೆ ಮುಂದೆ ಮಂಟಪ ಹಾಕಿದ್ದರು. ಪ್ರಸಾದ ಮಂಟಪದಲ್ಲಿ ಸ್ನೇಹಿತರ ಜತೆ ಸೇರಿ ಡ್ಯಾನ್ಸ್ ಮಾಡುತ್ತಿದ್ದರು.
ಪ್ರಸಾದ್ ಡ್ಯಾನ್ಸ್ ಮಾಡುವಾಗ ಏಕಾಏಕಿ ಕುಸಿದು ಬಿದ್ದಿದ್ದು, ಸ್ನೇಹಿತರು ಮತ್ತು ಸಂಬಂಧಿಕರು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೆ ಪ್ರಸಾದ್ ಮೃತಪಟ್ಟಿದ್ದರು.
ಪ್ರಸಾದ್ ಹೃದಯಾಘಾತದಿಂದ ಕುಸಿದು ಬೀಳುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.