ಬೆಂಗಳೂರು:ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಹೇಳಿದ್ದ ಸಿಎನ್ ಅಶ್ವತ್ಥನಾರಾಯಣ ಹಾಗೂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದ ಹರೀಶ್ ಪೂಂಜಾ ವಿರುದ್ಧ ಈಗಾಗಲೇ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನೂತನ ಡಿಜಿಪಿ ಅಲೋಕ್ ಮೋಹನ್, ಈ ಬಗ್ಗೆ ಕ್ರಮ ಆಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಡಿಜಿಪಿ ಮಾತನಾಡಿ,ಈಗಾಗಲೇ ಮೈಸೂರಿನಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಸೇರಿದಂತೆ ಒಟ್ಟು ಮೂರು ಕೇಸ್ ಆಗಿದೆ. ಈ ಬಗ್ಗೆ ಕ್ರಮ ಆಗುತ್ತೆ.ಮುಂದೆ ಎಲ್ಲಾ ಕೆಲಸ ಅಗುತ್ತೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಜಿ ಅಲೋಕ್ ಮೋಹನ್, ರೌಡಿಸಂ ಅನ್ನೊದು ಜೀರೋ ಆಗಬೇಕು.ಡ್ರಗ್ಸ್ ವಿರುದ್ಧ ಕ್ರಮ ಆಗಬೇಕು.ಬೆಂಗಳೂರು ಡ್ರಗ್ಸ್ ರಹಿತ ಸಿಟಿ ಆಗಬೇಕು. ಪೊಲೀಸರು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರ ಜೊತೆಗೆ ವರ್ತನೆ ಮಾಡಬೇಕು.ಜನ ಸ್ನೇಹಿ ಪೊಲೀಸ್ ಕೆಲಸ ಮಾಡಬೇಕು.ಸಾರ್ವಜನಿಕರ ದೂರುಗಳನ್ನು ಪಡೆದು ಪ್ರಕರಣ ದಾಖಲು ಮಾಡಬೇಕು ಎಂದು ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಶೇಕಡಾ 100 ರಷ್ಟು ನಿಯಂತ್ರಣದಲ್ಲಿ ಇರಬೇಕು.ಸಮಾಜದಲ್ಲಿ ಯಾವ ಕಾರಣಕ್ಕೂ ಅಶಾಂತಿ ನೆಲಸಲು ಬಿಡಬಾರದು ಎಂದು ನೂತನ ಡಿಜಿಪಿ ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.