ವ್ಯಕ್ತಿಯೊಬ್ಬ ಕುಟುಂಬದವರೊಂದಿಗಿದ್ದ ಜಾಯಿಂಟ್ ಖಾತೆಯ ಹಣವನ್ನೆಲ್ಲ ತೆಗೆದು ರಸ್ತೆಯ ಮೇಲೆ ಬರೋಬ್ಬರಿ 1.6 ಕೋಟಿ ರೂ.ಎಸೆದು ಹೋಗಿರುವ ಶಾಕಿಂಗ್ ಘಟನೆ ವರದಿಯಾಗಿದೆ.
ಅಮೆರಿಕದ 38 ವರ್ಷದ ಕಾಲಿನ್ ಡೇವಿಸ್ ಮೆಕಾರ್ಥಿ ಎನ್ನುವ ವ್ಯಕ್ತಿ ತಮ್ಮ ಕುಟುಂಬ ಇಟ್ಟಿದ್ದ ಷೇರುಗಳನ್ನು ವಾಪಸ್ ತೆಗೆದುಕೊಂಡು 2,00,000 ಡಾಲರ್ ಅಂದರೆ 1 ಕೋಟಿ 63 ಲಕ್ಷದ 88 ಸಾವಿರದ 640 ರೂಪಾಯಿಗಳು ಹಣ ತೆಗೆದುಕೊಂಡು ಒರೆಗಾನ್ ರಾಜ್ಯ ಯುಜೆನ್ ನಗರದ ಪ್ರಮುಖ ಹೆದ್ದಾರಿಯಲ್ಲಿ ಎಸೆದಿದ್ದಾನೆ.
ಹೆದ್ದಾರಿಯಲ್ಲಿ ರಾತ್ರಿ ವೇಳೆ ಕಾರು ಚಾಲನೆ ಮಾಡುತ್ತ ನೋಟುಗಳನ್ನು ರಸ್ತೆಯಲ್ಲಿ ಎಸೆಯುತ್ತಾ ಹೋಗಿದ್ದಾನೆ.ಹಣ ಗಿಫ್ಟ್ ಕೊಡುವ ಮೂಲಕ ಇತರರನ್ನು ಆಶೀರ್ವಾದಿಸುವೆ ಎಂದು ಮೆಕಾರ್ಥಿ ಹೇಳಿದ್ದಾರೆ.
ಮೆಕಾರ್ಥಿ ಹೆದ್ದಾರಿಯಲ್ಲಿ ಹಣ ಎಸೆಯುವುದು ಕಂಡು ಜನ ಹಣ ಸಂಗ್ರಹಿಸಲು ಮುಗಿಬಿದ್ದಿದ್ದರು. ರಸ್ತೆಯೆಲ್ಲೆಲ್ಲ ವಾಹನಗಳನ್ನು ನಿಂತು ಫುಲ್ ಟ್ರಾಫಿಕ್ ಆಗಿತ್ತು.ಜನರು ಟಾರ್ಚ್ ಹಾಕಿಕೊಂಡು ಕತ್ತಲಲ್ಲಿ ನೋಟುಗಳನ್ನು ಹುಡುಕಿದ್ದಾರೆ.
ಇದರ ಬೆನ್ನಲ್ಲೇ ಡೆವೀಸ್ ವಿರುದ್ಧ ಈತನ ಕುಟುಂಬ ಗಂಭೀರ ಆರೋಪ ಮಾಡಿದ್ದು, ಕುಟುಂಬಕ್ಕಾಗಿ ಇಟ್ಟಂತ ಹಣವನ್ನೆಲ್ಲ ಖಾಲಿ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.