ಬಂಟ್ವಾಳ; ಯುವಕ‌ನೋರ್ವ ಮೃತ್ಯು, ಡೆಂಗ್ಯೂ ಶಂಕೆ

ಬಂಟ್ವಾಳ:ಯುವಕನೋರ್ವ ಜ್ವರದಿಂದ‌ ಮೃತಪಟ್ಟಿದ್ದು, ಡೆಂಗ್ಯೂ ಶಂಕೆ ವ್ಯಕ್ತವಾಗಿರುವ ಘಟನೆ ಬಂಟ್ವಾಳ ವಾಮದಪದವಿನಲ್ಲಿ ನಡೆದಿದೆ.

ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ(31) ಮೃತಪಟ್ಟ ಯುವಕ.

ಜ್ವರದಿಂದ ಬಳಲುತ್ತಿದ್ದ ಯುವಕ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸಂದೀಪ್ ಅವರ ತಂದೆ ಹಳ್ಳಿ ವೈದ್ಯನಾಗಿ ಸೇವೆ ಸಲ್ಲಿಸಿದರೆ, ತಾಯಿ ಪುಷ್ಪಾವತಿ ವಾಮದಪದವು ಗ್ರಾಮಪಂಚಾಯತ್ ಸದಸ್ಯರಾಗಿದ್ದಾರೆ.

ಇತ್ತೀಚಿಗೆ ಮದುವೆಯಾಗಿದ್ದ ಸಂದೀಪ್ ಒಂದು ವರ್ಷದ ಮಗು, ಪತ್ನಿ ಸಹಿತ ಅಪಾರ ಜನರನ್ನು ಅಗಲಿದ್ದಾರೆ.

ಟಾಪ್ ನ್ಯೂಸ್