ಪ್ರಿಯಕರ ದೂರವಾದ ಸಿಟ್ಟಿಗೆ ಆತನ ಮಗಳನ್ನು ಕತ್ತು ಸೀಳಿ ಕೊಲೆಗೈದ ಯುವತಿ
ನವದೆಹಲಿ;ಪ್ರಿಯಕರ ದೂರವಾದ ಸಿಟ್ಟಿಗೆ ಆತನ 11 ವರ್ಷದ ಮಗನನ್ನು ಪ್ರೇಯಸಿ ಕತ್ತು ಸೀಳಿ ಕೊಲೆ ಮಾಡಿದ ಭೀಕರ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೂಜಾ ಕುಮಾರಿ(24) ಪೊಲೀಸರು ಬಂಧಿಸಿದ್ದು, ಈಕೆ ಪ್ರಿಯಕರನ 11 ವರ್ಷದ ಮಗನನ್ನು ಮಲಗಿದ್ದಾಗ ಕೊಂದು ಪೆಟ್ಟಿಗೆಯೊಳಗೆ ಇರಿಸಿ ಪರಾರಿಯಾಗಿದ್ದಳು.
ಜಿತೇಂದರ್ ಎಂಬಾತನ ಜೊತೆ ಪೂಜಾ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಳು. ಜಿತೇಂದರ್ ಈಕೆಯನ್ನು ತೊರೆದು ಮೊದಲ ಪತ್ನಿ ಹಾಗೂ ಮಗನ ಬಳಿ ವಾಪಸ್ಸು ಬಂದಿದ್ದಾನೆ.
ಜಿತೇಂದರ್ ಮೊದಲ ಪತ್ನಿಗೆ ಡಿವೋರ್ಸ್ ನೀಡದೆ ಆಕೆ ಬಳಿ ವಾಪಸ್ ಹೋಗಲು ಮಗನೇ ಕಾರಣ ಎಂದು ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಆಗಸ್ಟ್ 10ರಂದು ಹಾಸಿಗೆ ಕೆಳಗಿನ ಬಾಕ್ಸ್ ನಲ್ಲಿ ಬಾಲಕನ ಶವ ಪತ್ತೆಯಾಗಿತ್ತು.ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಮಹಿಳೆಯ ಬಂಧನ ನಡೆದಿದೆ.