ದೆಹಲಿಯಲ್ಲಿ ಮತ್ತೆ ಬುಲ್ಡೋಜರ್ ಘರ್ಜನೆ; ಮಸೀದಿ & ದೇವಸ್ಥಾನಗಳ ನೆಲಸಮ

ನವದೆಹಲಿ:ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು ಶನಿವಾರ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಕಾಲುದಾರಿಯಲ್ಲಿದ್ದ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸಿದೆ.

ಪಾದಚಾರಿ ಮಾರ್ಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ ಮತ್ತು ಅವುಗಳನ್ನು ಕೆಡವಲು ನ್ಯಾಯಾಲಯ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಮಾತನಾಡಿ, ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಚಾಲನೆ ನೀಡಲಾಗುತ್ತಿದೆ, ಈ ಕುರಿತು ನ್ಯಾಯಾಲಯದ ಆದೇಶವಿದೆ ಎಂದರು.

ದೆಹಲಿ-ಉತ್ತರ ಪ್ರದೇಶ ಗಡಿಯ ದೆಹಲಿ ಭಾಗದಲ್ಲಿ ಇರುವ 23 ಧಾರ್ಮಿಕ ಕಟ್ಟಡಗಳ ಪೈಕಿ 9 ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅನುಮೋದನೆ ನೀಡಿದ್ದು, ಇದೀಗ ಕಾರ್ಯಾಚರಣೆ ಮುಂದುವರಿದಿದೆ.

ಇದಕ್ಕೂ ಮೊದಲು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವರು ದೆಹಲಿ-ಸಹರನ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ 9 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುವ ಸರ್ಕಾರದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರು.

ಇನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಧಾರ್ಮಿಕ ಕಟ್ಟಡಗಳನ್ನು ಕೆಡಹುವುದನ್ನು ತಡೆಯಬೇಕು ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಅವರಿಗೆ ಮನವಿ ಮಾಡಿದ್ದಾರೆ‌.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com