ನವದೆಹಲಿ;7 ವರ್ಷದ ಮಗಳನ್ನು ಮಲತಾಯಿಯೋರ್ವಳು ಇಕ್ಕುಳಗಳಿಂದ ಸುಟ್ಟ ದಾರುಣ ಘಟನೆ ದೆಹಲಿಯ ಆರ್.ಕೆ. ಪುರಂನಲ್ಲಿ ನಡೆದಿದೆ.
ಇದೀಗ ಆರೋಪ ಸಾಬೀತಾದ ಹಿನ್ನೆಲೆ ಮಲತಾಯಿ ನರ್ಸ್ ಹಾಗೂ ಆಕೆಯ ಮಗನನ್ನು ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಈ ಕುರಿತು ದೆಹಲಿಯ ಆರ್.ಕೆ. ಪುರಂ ಪೋಲಿಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದು, ಬಾಲಕಿಗೆ ಮಲತಾಯಿಯೇ ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಬಾಲಕಿಯ ಮೈಯಲ್ಲಿ ಸುಟ್ಟ ಗಾಯಗಳಿದ್ದವು. ಸದ್ಯಕ್ಕೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಕ್ಕಳ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.