ನವದೆಹಲಿ;ದೆಹಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿಡಿಯೊ ವೈರಲ್ ಆಗಿತ್ತು. ಪೊಲೀಸರೊಂದಿಗೆ ಬಂದ ವಿಡಿಯೋ ಮಾಡುವ ಜನ ತರಗತಿಯೊಂದಕ್ಕೆ ಪ್ರವೇಶಿಸಿದ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ವಿಡಿಯೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಲಾಗಿದೆ. ಅವರು ಸರ್ಕಾರಿ ಶಾಲೆಗಳನ್ನು ಇಸ್ಲಾಂನ ಧಾರ್ಮಿಕ ಶಿಕ್ಷಣದ ಶಾಲೆಗಳಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಈ ವಿಡಿಯೋ ಉತ್ತರ ಪ್ರದೇಶದ ಗಾಜಿಯಾಬಾದ್‌ನದ್ದು, ದೆಹಲಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿಯಾಗಿದೆ. ನವೆಂಬರ್ 19 ರಂದು ಗಾಜಿಯಾಬಾದ್‌ನ ವಿಜಯ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಜನರು ಮತ್ತು ಪೊಲೀಸರು ಪ್ರವೇಶಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಈ ವೀಡಿಯೊವನ್ನು ಹಿಂದಿಯಲ್ಲಿ ತಲೆಬರಹದ ಜೊತೆ ಹಂಚಿಕೊಳ್ಳಲಾಗಿದೆ.ಇದು ದೆಹಲಿಯ ಶಾಲೆಯೊಂದರ ವೀಡಿಯೊ ಎಂದು ಹೇಳಲಾಗಿದೆ. ಅಲ್ಲಿ ಕೇಜ್ರಿವಾಲ್ ಸರ್ಕಾರಿ ಶಾಲೆಗಳನ್ನು ಮದರಸಾಗಳಾಗಿ ಪರಿವರ್ತಿಸಲು ಅನುಮತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಲೇಖನವನ್ನು ಬರೆಯುವ ಸಮಯದಲ್ಲಿ, ಚಂದರ್ ಭೂಷಣ್ ರಜಪೂತ್ ಈ ಪೋಸ್ಟ್ ನ್ನು 4,200 ಕ್ಕೂ ಹೆಚ್ಚು ಬಾರಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋವನ್ನು ಬಿಜೆಪಿ ದೆಹಲಿ ವಕ್ತಾರ ಖೇಮಚಂದ್ ಶರ್ಮಾ ಕೂಡ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ವಿಜಯ್ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಂದಿಗೆ ಕ್ವಿಂಟ್ ಮಾದ್ಯಮ ಮಾತನಾಡಿ ಸ್ಪಷ್ಟೀಕರಣ ಪಡೆದು ವರದಿ ಮಾಡಿದೆ.
ಈ ಘಟನೆಯ ಬಗ್ಗೆ ಶಾಲೆಯ ಆಡಳಿತ ಮಂಡಳಿಯು ಯಾವುದೇ ದೂರು ದಾಖಲಿಸಿಲ್ಲ, ಆದ್ದರಿಂದ ಯಾವುದೇ ಪ್ರಕರಣವಿಲ್ಲ ಎಂದು ಅವರು ಹೇಳಿದರು, ವೀಡಿಯೊದಲ್ಲಿರುವ ಜನರನ್ನು ಅಲ್ಲಿ ಸೇರಲು ಅನುಮತಿಯಿಲ್ಲದ ಕಾರಣ ಅವರ ಮನೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಸ್ಪಷ್ಟವಾಗಿ, ವೈರಲ್ ವೀಡಿಯೊ ಹೇಳಿಕೊಂಡಂತೆ ದೆಹಲಿಯದಲ್ಲ, ಆದರೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಿಜಯ್ ನಗರದ ವಿಡಿಯೋವಾಗಿದೆ ಎಂದು ತಿಳಿದು ಬಂದಿದೆ.ದೆಹಲಿ ಕೇಜ್ರಿವಾಲ್ ಕುರಿತ ಆರೋಪ ಸುಳ್ಳು ಎನ್ನುವುದು ಬಹಿರಂಗವಾಗಿದೆ.