ನವದೆಹಲಿ:ಬಸ್ ಕಿಟಕಿಯಿಂದ ತಲೆ ಹೊರ ಹಾಕಿ ವಾಂತಿ ಮಾಡುತ್ತಿದ್ದ ಮಹಿಳೆ ಓವರ್ ಟೇಕ್ ಮಾಡಲು ಬಂದ ಅಪರಿಚಿತ ವಾಹನದ ಮಧ್ಯೆ ಸಿಲುಕಿ ತಲೆ ಜಜ್ಜಿ ಮೃತಪಟ್ಟ ಭೀಕರ ಘಟನೆ ನವದೆಹಲಿಯಲ್ಲಿ ನಡೆದಿದೆ.
ಹರಿಯಾಣ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಹೊಸದಿಲ್ಲಿಯ ಹೊರವಲಯದ ಅಲಿಪುರದಲ್ಲಿ ಸಂಚರಿಸುವಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೃತ ಮಹಿಳೆಯನ್ನು ಉತ್ತರಪ್ರದೇಶದ ಪ್ರತಾಪಗಡದ ನಿವಾಸಿ ಬಬ್ಲಿ ಎಂದು ಗುರುತಿಸಲಾಗಿದೆ. ಕಾಶ್ಮೀರ ಗೇಟ್ ನಿಂದ ಕುಟುಂಬ ಸದಸ್ಯರೊಂದಿಗೆ ಲೂಧಿಯಾನಕ್ಕೆ ಪ್ರಯಾಣಿಸುವಾಗ ಘಟನೆ ನಡೆದಿದೆ.
ಮಹಿಳೆ ವಾಂತಿ ಮಾಡಲು ತಲೆ ಹೊರಹಾಕಿದಾಗ ಏಕಾಏಕಿ ಓವರ್ ಟೇಕ್ ಮಾಡುತ್ತಾ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದು ತಲೆ ಜಜ್ಜಿದಾಗ ಸ್ಥಳದಲ್ಲೇ ಅಕೆ ಮೃತಪಟ್ಟಿದ್ದಾರೆ.
ಘಟನೆ ಬಳಿಕ ಅಪರಿಚಿತ ವಾಹನ ಪರಾರಿಯಾಗಿದೆ.