ಡೆಹ್ರಾಡೂನ್:ತಾಯಿ ಮತ್ತು ಹೆಂಡತಿ ಜೊತೆಗೆ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ನಾಗಘೇರ್ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಅರಾರಿಯಾ ಪ್ರದೇಶದ ನಿವಾಸಿ ಮಹೇಶ್ ಎಂಬಾತ ತನ್ನ ಕುಟುಂಬದ ಐವರನ್ನು ಅಮಾನುಷಯವಾಗಿ ಕೊಲೆ ಮಾಡಿದ್ದು ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಆರೋಪಿ ರಾಣಿಪೋಖಾರಿಯ ಶಾಂತಿನಗರದಲ್ಲಿ ವಾಸಿಸುತ್ತಿದ್ದು,ವ್ಯಕ್ತಿಗೆ ನಾಲ್ಕು ಮಕ್ಕಳಿದ್ದರು.
ಜನ್ಮ ನೀಡಿದ ತಾಯಿ,ಕಟ್ಟಿಕೊಂಡ ಹೆಂಡತಿ ಹಾಗೂ ಮೂವರು ಮುದ್ದು ಮಕ್ಕಳನ್ನು ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಆದರೆ ಇವರೊಬ್ಬರ ಮಗಳು ಚಿಕ್ಕಮ್ಮನ ಬಳಿಗೆ ಹೋಗಿದ್ದರಿಂದ ಬದುಕುಳಿದ್ದಾಳೆ.
ಆರೋಪಿಯನ್ನು ಇದೀಗ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಈತನ ಕೃತ್ಯಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ.