ಚುನಾವಣೆಯಲ್ಲಿ ಸ್ಪರ್ಧೆಗೆ ಪಕ್ಷ ಟಿಕೆಟ್ ಕೊಟ್ಟಿಲ್ಲ ಎಂದು ಬಿಜೆಪಿ ಯುವನಾಯಕ ಆತ್ಮಹತ್ಯೆ;ವರದಿ

ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಬಿಜೆಪಿಯ ಯುವ ನಾಯಕ ಆತ್ಮಹತ್ಯೆ

ಉತ್ತರಪ್ರದೇಶ;ಪುರಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ‌ ಎಂದು ಬಿಜೆಪಿ‌ ಸ್ಥಳೀಯ ನಾಯಕ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ.

ಉತ್ತರಪ್ರದೇಶದಲ್ಲಿ ಪುರಸೆಭೆಯ ಕೆಲ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.ದೀಪಕ್ ಸೈನಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.ಕಳೆದ ಪುರಸಭೆ ಚುನಾವಣೆಯಲ್ಲಿ 19ನೇ ವಯಸ್ಸಿನಲ್ಲಿ ಬಿಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸಿ ಗೆದ್ದಿದ್ದರು.ಪಕ್ಷಕ್ಕಾಗಿ ದುಡಿದಿದ್ದ ಅವರು ಟಿಕೆಟ್ ಸಿಗದಿದ್ದಕ್ಕೆ ಮನನೊಂದು ವಿಷ ಸೇವಿಸಿ ಜೀವನ ಅಂತ್ಯಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಕಂಡ್ಲಾದ ಮೊಹಲ್ಲಾ ರೈಜದ್ಗಾನ್ ನಿವಾಸಿಯಾಗಿರುವ ದೀಪಕ್ ಪ್ರಸ್ತುತ ಬಿಜೆಪಿಯ ಹಿಂದುಳಿದ ವರ್ಗದ ಕೋಶದಲ್ಲಿ ಜಿಲ್ಲಾ ಸಂಶೋಧನಾ ಮುಖ್ಯಸ್ಥರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.2017ರಲ್ಲಿ, ದೀಪಕ್ ಕಳೆದ ನಾಗರಿಕ ಚುನಾವಣೆಯಲ್ಲಿ ಬಿಜೆಪಿಯ ಚಿಹ್ನೆಯ ಮೇಲೆ ವಾರ್ಡ್-3 ರಿಂದ ಸ್ಪರ್ಧಿಸಿದ್ದರು.

ಅವರು ಅಧ್ಯಕ್ಷ ಸ್ಥಾನಕ್ಕೆ ಆಗ್ರಹಿಸಿದ್ದರು.ಆದರೆ ಅವರ ವಯಸ್ಸಿನ ಕಾರಣ ಪಕ್ಷದಿಂದ ನಿರಾಕರಿಸಲಾಯಿತು. ಇದಾದ ನಂತರ ದೀಪಕ್ ವಾರ್ಡ್-1ರಿಂದ ಕೌನ್ಸಿಲರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.ವಾರ್ಡ್-3 ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.ಇದರಿಂದಾಗಿ ದೀಪಕ್ ಚುನಾವಣೆಯಲ್ಲಿ ಸ್ಪರ್ಧಿಸಲು ವಾರ್ಡ್ ಬದಲಾಯಿಸಬೇಕಾಯಿತು.

ನಿನ್ನೆ ದೀಪಕ್ ದೇವಸ್ಥಾನದಲ್ಲಿ ಪೂಜೆ ಮಾಡುವುದಾಗಿ ಹೇಳಿ ‌ಹೊರಗೆ ಬಂದಿದ್ದ.ಪಟ್ಟಿ ಬಿಡುಗಡೆ ಮಾಡುವಾಗ ಅವರು ದೇವಸ್ಥಾನದಲ್ಲಿದ್ದರು.ಪಟ್ಟಿಯಲ್ಲಿ ವಾರ್ಡ್-1ರಿಂದ ಯಾರ ಹೆಸರೂ ಇರಲಿಲ್ಲ.ಇದರಿಂದ ಮನನೊಂದ ದೀಪಕ್ ಮಾರುಕಟ್ಟೆಯಿಂದ ವಿಷಕಾರಿ ಪದಾರ್ಥ ಖರೀದಿಸಿ ಮನೆಗೆ ಬಂದ ಬಳಿಕ ನೀರಿನಲ್ಲಿ ಬೆರೆಸಿ ಕುಡಿದಿದ್ದಾನೆ.ಇದನ್ನು ತಿಳಿದು ಸಂಬಂಧಿಕರು ಮೀರತ್‌ನ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

ಮಗ ಸಂಜೆ ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದ ಎಂದು ದೀಪಕ್‌ನ ತಾಯಿ ಪ್ರೇಮಲತಾ ಅಳುತ್ತಾ ಹೇಳಿದರು. ಅಮ್ಮ ಊಟ ತಯಾರಿಸಿ ಕೊಡಬೇಕು, ಇಂದು ಪಟ್ಟಿ ಬಿಡುಗಡೆಯಾಗಲಿದೆ. ನಾನು ಬಂದು ತಿನ್ನುತ್ತೇನೆ ಎಂದು ಹೇಳಿದ್ದ. ನನ್ನ ಮಗ ಇಹಲೋಕ ತ್ಯಜಿಸುತ್ತಾನೆ ಎಂದು ನನಗೆ ತಿಳಿದಿರಲಿಲ್ಲ. ನಮಗೆ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವ ಬೇಡ ನನ್ನ ಮಗನನ್ನು ವಾಪಸ್ ಕೊಡಿ ಎಂದು ಹೇಳಿದರು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com