ರಾಯ್ ಪುರದಿಂದ 110 ಕಿ.ಮೀ ದೂರವಿರುವ ಜಿಲ್ಲಾಧಿಕಾರಿ ಕಚೇರಿಗೆ ಹಸುವಿನ ಸಗಣಿ ಪ್ರಮುಖ ಘಟಕಾಂಶವಾಗಿರುವ ಪೇಂಟ್ ನ್ನು ಹಚ್ಚಲಾಗಿದೆ.
ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಹಾಗೂ ಶಾಲೆಗಳಿಗೆ ನೈಸರ್ಗಿಕ ಎಮಲ್ಷನ್ ಬಣ್ಣ ಹಾಕಬೇಕೆಂಬ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದ ನಿರ್ಧಾರದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಈ ಬಣ್ಣ ಹಾಕಲಾಗಿದೆ.
ಬಲೋದ್ ನಲ್ಲಿ ಈಗಾಗಲೇ ಸೆಗಣಿ ಆಧಾರಿತ ವಾಸನೆ ರಹಿತ ಬಣ್ಣ (ಪೇಂಟ್) ತಯಾರಿಕೆ ಘಟಕಗಳಿದೆ.ಈ ಪೇಂಟ್ ತಯಾರಕ ಘಟಕಗಳನ್ನು ಗೋಶಾಲೆಗಳಲ್ಲೇ ಸ್ಥಾಪಿಸಲಾಗಿದ್ದು, ಮಹಿಳಾ ಸ್ವಸಹಾಯ ಗುಂಪುಗಳು ಇದರಲ್ಲಿ ತೊಡಗಿಸಿಕೊಂಡಿವೆ.
ಕೇವಲ ಜಿಲ್ಲಾಧಿಕಾರಿ ಕಚೇರಿಯಷ್ಟೇ ಅಲ್ಲ. ನಾವು ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಸಗಣಿಯಿಂದ ತಯಾರಾದ ಪೇಂಟ್ ನ್ನು ಬಳಕೆ ಮಾಡುತ್ತಿದ್ದೇವೆ. ಸಗಣಿ ಆಧರಿತ ಪೇಂಟ್ ಗಳು ಕಡಿಮೆ ಖರ್ಚಿನದ್ದಾಗಿದ್ದು, ಗೋಧನ್ ನ್ಯಾಯ ಯೋಜನೆಯಡಿ ಉತ್ತೇಜಿಸಲಾಗುತ್ತಿದೆ. ಇದರಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ವಾಸನೆಯಿಲ್ಲದ ಗುಣಗಳು ಇವೆ ಎಂದು ಜಿಲ್ಲಾಧಿಕಾರಿ ಕುಲ್ದೀಪ್ ಶರ್ಮಾ ಹೇಳಿದ್ದಾರೆ.