ದಾವಣಗೆರೆ; ಮಹಿಳೆಯನ್ನು ಹೊತ್ತೊಯ್ದ ಕತ್ತು ಸೀಳಿ ರಕ್ತ ಹೀರಿದ ಚಿರತೆ

ದಾವಣಗೆರೆ;ಮಹಿಳೆಯನ್ನು ಹೊತ್ತೊಯ್ದ ಕತ್ತು ಸೀಳಿ ರಕ್ತ ಹೀರಿದ ಚಿರತೆ
ದಾವಣಗೆರೆ;ಚಿರತೆಯೊಂದು ಮಹಿಳೆ ಮೇಲೆ ದಾಳಿ ಮಾಡಿ ಆಕೆಯ ರಕ್ತ ಹೀರಿ ಕೊಂದು ಹಾಕಿದ ಘಟನೆ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 55 ವರ್ಷದ ಕಮಲಾಬಾಯಿ ಎಂದು ಗುರುತಿಸಲಾಗಿದೆ.

ನಿನ್ನೆ ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಕಮಲಾಬಾಯಿ ಅವರ ಕುತ್ತಿಗೆಗೆ ಬಾಯಿ ಹಾಕಿ ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಇತರ ಮಹಿಳೆಯರು ಕಿರುಚಾಡಿದ್ದಾರೆ.ಕಮಲಾ ಬಾಯಿ ಕುತ್ತಿಗೆಗೆ ಬಾಯಿ ಹಾಕಿರುವ ಚಿರತೆ ರಕ್ತವನ್ನು ಹೀರಿ ಅಲ್ಲಿಂದ ತೆರಳಿದೆ.
ಕಳೆದ ಆರು ತಿಂಗಳಿನಿಂದಲೂ ಈ ಭಾಗದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು,ಅವುಗಳನ್ನು ಹಿಡಿಯಲು ಪಂಜರ ಇಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಅರಣ್ಯ ಇಲಾಖೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಮಾಯಕ ಜೀವ ಬಲಿಯಾಗಿದೆ.‌ಇದರಿಂದಾಗಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಟಾಪ್ ನ್ಯೂಸ್