ನವವಿವಾಹಿತ ದಂಪತಿ ಬೆಡ್ ರೂಂನಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

ಭುವನೇಶ್ವರ್; ನವ ವಿವಾಹಿತ ದಂಪತಿ ಬೆಡ್​ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಬಂಕಿ ಬ್ಲಾಕ್​ ವ್ಯಾಪ್ತಿಯ ಭೇದರಾಮಚಂದ್ರಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮೃತ ದಂಪತಿಯನ್ನು ಧರಣಿಧರ್​ ಸಾಹು ಮತ್ತು ನಿರುಪಮಾ ಸಾಹು ಎಂದು ಗುರುತಿಸಲಾಗಿದೆ.ಇಬ್ಬರು 7 ತಿಂಗಳ ಹಿಂದೆ ಮದುವೆ ಆಗಿದ್ದರು.

ಧರಣಿಧರ್​ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಊರಿಗೆ ಬಂದಿದ್ದ.ಗುರುವಾರ ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಬೆಡ್​ರೂಮ್​ನ ಸೀಲಿಂಗ್​ ಫ್ಯಾನ್​ಗೆ ಧರಣಿಧರ್​ ಮತ್ತು ನಿರುಪಮಾ ನೇಣು ಬಿಗಿದುಕೊಂಡಿದ್ದಾರೆ.

ಘಟನೆ ಬಳಿಕ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಿದರು. ಆದರೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದುಕೊಂಡರು.

ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕಾರಣ ತಿಳಿಯಬಹುದು.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು