ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ನಾಮಪತ್ರಗಳು ತಿರಸ್ಕಾರ, ಜಿಲ್ಲೆಯ 8 ಕ್ಷೇತ್ರಗಳಲ್ಲಿ ಒಟ್ಟು ಎಷ್ಟು ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಗೊತ್ತಾ?

ಮಂಗಳೂರು;ದ.ಕ.ಜಿಲ್ಲೆಯ 8 ಕ್ಷೇತ್ರಗಳಿಗೆ ಸಲ್ಲಿಸಿದ್ದ 109 ನಾಮಪತ್ರಗಳ ಪೈಕಿ 7 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಈ ಕುರಿತು ಮಾಹಿತಿ ನೀಡಿರುವ ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್,ನಾಮಪತ್ರಗಳ ಪರಿಶೀಲನೆಯ ಸಂದರ್ಭ ಏಳು ನಾಮಪತ್ರಗಳು ತಿರಸ್ಕೃತಗೊಂಡಿದೆ‌‌‌. 72 ಅಭ್ಯರ್ಥಿಗಳ 102 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು ನಗರ ಉತ್ತರದಲ್ಲಿ ಒಂದು ಹಾಗೂ ಮಂಗಳೂರು ನಗರ ದಕ್ಷಿಣ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ತಲಾ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 97 ಪುರುಷ ಹಾಗೂ 12 ಮಹಿಳಾ ಅಭ್ಯರ್ಥಿಗಳು ಸೇರಿ 109 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಅದರಲ್ಲಿ 64 ಪುರುಷ ಹಾಗೂ 8 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕಾರಗೊಂಡಿವೆ ಎಂದು ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ 10, ಮೂಡುಬಿದಿರೆಯಲ್ಲಿ 9, ಮಂಗಳೂರು ನಗರ ಉತ್ತರ 12, ಮಂಗಳೂರು ನಗರ ದಕ್ಷಿಣ 8, ಮಂಗಳೂರು 8, ಬಂಟ್ವಾಳ 6, ಪುತ್ತೂರು 10 ಹಾಗೂ ಸುಳ್ಯದ 9 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್