ಧರ್ಮಸ್ಥಳ;ಅನ್ಯಕೋಮಿನ ಜೋಡಿಯನ್ನು ತಂಡವೊಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಹೊರವಲಯದ ಕನ್ಯಾಡಿಯಲ್ಲಿ ಈ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ದಾದಾಪೀರ್ ಎಂಬಾತ ವಿವಾಹಿತ ಹಿಂದೂ ಮಹಿಳೆಯ ಜತೆಯಾಗಿ ಧರ್ಮಸ್ಥಳಕ್ಕೆ ಬಂದಿದ್ದರು.
ಅವರು ಲಾಡ್ಜ್‌ನಲ್ಲಿ ರೂಂ ಪಡೆಯಲೆಂದು ಕನ್ಯಾಡಿಗೆ ಬಂದಿದ್ದರು.ಈ ವೇಳೆ ರೂಂ ಕೊಟ್ಟಿಲ್ಲ.
ಬಳಿಕ ಸ್ಥಳೀಯ ಸಂಘಪರಿವಾರದ ಕಾರ್ಯಕರ್ತರು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಪೊಲೀಸರು ಇಬ್ಬರ ಪೋಷಕರಿಗೂ ಮಾಹಿತಿ ನೀಡಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.