ಮೂರು ಕ್ರಿಮಿನಲ್ ಮಸೂದೆ ಹಿಂಪಡೆದು, ಕರಡು ಮಸೂದೆ ಮಂಡನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬ್ರಿಟಿಷ್ ಕಾಲದ ಹಳೆಯ 3 ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಮಂಗಳವಾರ ಹಿಂಪಡೆದಿದ್ದು, ಹೊಸ ಕರಡು ವಿಧೇಯಕಗಳನ್ನು ಮಂಡಿಸಿದ್ದಾರೆ.

ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳ ನಂತರ ಕೇಂದ್ರ ಸರ್ಕಾರ ಈ ಹಿಂದೆ ಲೋಕಸಭೆಯಲ್ಲಿ ಮಂಡಿಸಿದ್ದ ಕ್ರಿಮಿನಲ್ ಪ್ರೊಸೀಜರ್ ಕೋಡ್-1898, ಭಾರತೀಯ ದಂಡ ಸಂಹಿತೆ-1860, ಇಂಡಿಯನ್ ಎವಿಡೆನ್ಸ್ ಆಕ್ಟ್-1872 ಒಳಗೊಂಡ ಮಸೂದೆಗಳನ್ನು ಹಿಂಪಡೆಯಲಾಗಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ಈ ಮೂರು ವಿಧೇಯಕಗಳನ್ನು ಮಂಡಿಸಲಾಗಿತ್ತು. ಆದರೆ ಅವುಗಳಿಗೆ ಸಂಸದೀಯ ಸ್ಥಾಯಿ ಸಮಿತಿ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು. ಹೀಗಾಗಿ ಇಂದು ಆ ಶಿಫಾರಸುಗಳನ್ನು ಒಳಗೊಂಡಿರುವ ಹೊಸ ಕರಡು ವಿಧೇಯಕಗಳನ್ನು ಮಂಡಿಸಿದರು.

ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ಹಲವಾರು ತಿದ್ದುಪಡಿಗಳನ್ನು ತರುವ ಬದಲು, ಬದಲಾವಣೆಗಳನ್ನು ಒಳಗೊಂಡಿರುವ ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಟಾಪ್ ನ್ಯೂಸ್