4 ಬಾರಿ ಹೃದಯಾಘಾತ, ಸ್ಟ್ರೋಕ್​, ಕರುಳಿನ ಕ್ಯಾನ್ಸರನ್ನು ಜಯಿಸಿದ ಖ್ಯಾತ‌ ಕ್ರಿಕೆಟಿಗ

ನ್ಯೂಜಿಲೆಂಡ್​ ತಂಡದ ಮಾಜಿ ಆಲ್​ರೌಂಡರ್​​ ಕ್ರಿಸ್​​​​​ ಕೇರ್ನ್ಸ್ 4 ಬಾರಿ ಹೃದಯಾಘಾತ, ಬೆನ್ನಿಗೆ ಸ್ಟ್ರೋಕ್​, ಕರುಳಿನ ಕ್ಯಾನ್ಸರ್​​​ಗೆ ತುತ್ತಾಗಿ ಇದೀಗ ಸಾವನ್ನು ಜಯಿಸಿ ಬಂದಿದ್ದಾರೆ.

ಸಾವನ್ನು ಜಯಿಸಿ ಬಂದ ಕ್ರಿಸ್​​​​​ ಕೇರ್ನ್ಸ್ ಮಾರ್ಚ್​ನಲ್ಲಿ ಮಲೇಷ್ಯಾ ಟೂರ್​ ಮಾಡಲಿದ್ದಾರೆ.ನಾನು ರಿಕವರಿ​ ಆಗಿದ್ದೇನೆ. ಇನ್ನು ತಡೆಯಲು ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕ್ರಿಸ್ ಗೆ 2021ರಲ್ಲಿ ನಾಲ್ಕು ಬಾರಿ ಹೃದಯಾಘಾತವಾ​ಗಿತ್ತು. ಬಳಿಕ 2022ರ ಫೆಬ್ರವರಿಯಲ್ಲಿ ಕರುಳಿನ ಕ್ಯಾನ್ಸರ್​​ಗೂ ತುತ್ತಾಗಿದ್ದರು.ಈ ಕುರಿತು ಕ್ರಿಸ್ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಸಾವನ್ನೇ ಗೆದ್ದು ಬಂದಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ.

ಟಾಪ್ ನ್ಯೂಸ್