ತಮಿಳುನಾಡು;ಕೊಯಂಬತ್ತೂರ್ ನ ಸ್ಥಳೀಯ ನ್ಯಾಯಾಲಯ ಇಬ್ಬರಿಗೆ ಬರೊಬ್ಬರಿ 171.74 ಕೋಟಿ ರೂ.ದಂಡ ವಿಧಿಸಿ ತೀರ್ಪನ್ನು ನೀಡಿದ್ದು,ಇದೀಗ ಸುದ್ದಿಯಾಗಿದೆ.
ಪಾಝಿ ಮಾರ್ಕೆಂಟಿಗ್ ಕಂಪನಿಯ ಇಬ್ಬರು ಡೈರೆಕ್ಟರ್‌ಗಳಿಗೆ 27 ವರ್ಷ ಜೈಲು ಶಿಕ್ಷೆ ಜೊತೆಗೆ 171.74 ಕೋಟಿ ರೂಪಾಯಿಯ ದಂಡ ಹಾಕಿದೆ.
ಕೆ.ಮೋಹನ್‌ರಾಜ್ ಮತ್ತು ಕಮಲಾವಲ್ಲಿ ಎಂಬವರಿಗೆ ಈ ದುಬಾರಿ ದಂಡ ವಿಧಿಸಲಾಗಿದೆ.ಇವರು ಸಾರ್ವಜನಿಕ ಠೇವಣಿದಾರರಿಗೆ 870.1 ಕೋಟಿ ರೂಪಾಯಿ ವಂಚನೆ ಮಾಡಿದ್ದರು.ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.ಸುದೀರ್ಘ ವಿಚಾರಣೆ ಬಳಿಕ ಇದೀಗ ತೀರ್ಪು ಹೊರ ಬಿದ್ದಿದೆ.