ಜಾಮೀನು ಸಿಕ್ಕರೂ 3 ವರ್ಷ ಅನ್ಯಾಯವಾಗಿ ಜೈಲು ಶಿಕ್ಷೆ ಅನುಭವಿಸಿದ ಯುವಕ

ಗುಜರಾತ್: ಕೋರ್ಟ್ ಜಾಮೀನು ನೀಡಿದ್ದರೂ ಸರ್ಕಾರದ ಬೇಜವಾಬ್ದಾರಿ ವರ್ತನೆಯಿಂದಾಗಿ ಹೆಚ್ಚುವರಿ ಮೂರು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಯುವಕನಿಗೆ 1ಲಕ್ಷ ರೂ.ಪಾವತಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

2020ರಲ್ಲಿ ರಿಜಿಸ್ಟ್ರಿ ಅವರಿಗೆ ಕಳುಹಿಸಲಾಗಿದ್ದ ಇಮೇಲ್ ನಲ್ಲಿ ಲಗತ್ತಿಸಲಾಗಿದ್ದ ಜಾಮೀನು ಆದೇಶ ಪತ್ರವನ್ನು ಜೈಲಾಧಿಕಾರಿಗಳು ತೆರೆದು ನೋಡದೆ ಇದ್ದ ಕಾರಣ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಜೈಲು ಅಧಿಕಾರಿಗಳು ಹೈಕೋರ್ಟ್‌ಗೆ ತಿಳಿಸಿದರು.

ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೆ ತನ್ನ ಸ್ವಾತಂತ್ರ್ಯವನ್ನು ಆನಂದಿಸಬಹುದಾಗಿತ್ತು. ಈ ನ್ಯಾಯಾಲಯವು ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ನೋಂದಾವಣೆ ಅಥವಾ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ಜೈಲು ಅಧಿಕಾರಿಗಳು ಗಮನ ಹರಿಸದ ಕಾರಣ ಜೈಲಿನಲ್ಲಿ ಉಳಿಯವಂತಾಯಿತು ಎಂದು ಕೋರ್ಟ್ ಹೇಳಿದೆ.

ಪ್ರಕರಣದಲ್ಲಿ ಜೈಲು ಅಧಿಕಾರಿಗಳ ನಿರ್ಲಕ್ಷ್ಯವನ್ನು ದೂಷಿಸಿದ ಹೈಕೋರ್ಟ್, ಸಂತ್ರಸ್ತನಿಗೆ 14 ದಿನಗಳಲ್ಲಿ 1 ಲಕ್ಷ ರೂಪಾಯಿ ಪಾವತಿಸುವಂತೆ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.

ಟಾಪ್ ನ್ಯೂಸ್