ಒಡಿಶಾ;ಭೀಕರ ಅಪಘಾತದಲ್ಲಿ ಮದುವೆಯಾದ ಮೂರೇ ದಿನದಲ್ಲಿ ನವದಂಪತಿ ದುರಂತ ಸಾವಿಗೀಡಾಗಿರುವ ಘಟನೆ ಒಡಿಶಾದ ಬೆರ್ಹಾಂಪುರ್ನಲ್ಲಿ ನಡೆದಿದೆ.
ಬೆರ್ಹಾಂಪುರ್ ಮೂಲದ ಸಿ.ಎಚ್. ಪ್ರನೇತಾ ಮತ್ತು ಜಿ ಬೆನು ಮೃತರು.ಫೆ.10ರಂದು ಪ್ರನೇತಾ ಮತ್ತು ಬೆನು ಮದುವೆಯಾಗಿದ್ದರು.
ಮದುವೆಯಾದ ಮೂರು ದಿನಗಳ ಬಳಿಕ ಇಬ್ಬರು ಬೈಕ್ನಲ್ಲಿ ಬೆರ್ಹಾಂಪುರ್ಗೆ ತೆರಳುತ್ತಿದ್ದರು. ಗೋಲಂತರ ಪೊಲೀಸ್ ಠಾಣೆ ಎದುರಿನ ತಿರುವಿನಲ್ಲಿ ಎದುರಿಗೆ ಬಂದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.