ಗದಗ;ಲಕ್ಷ್ಮೇಶ್ವರದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿಶಾ ಅವರ ಸಾರ್ವಜನಿಕ ಸಮಾವೇಶಕ್ಕೆ ಕೂಲ್ ಡ್ರಿಂಕ್ಸ್ ಮಾರಟಕ್ಕೆ ಬಂದಿದ್ದವನಿಗೆ ಸಮಾವೇಶಕ್ಕೆ ಬಂದವರು ಹಣ ಕೊಡದೆ ಕೂಲ್ ಡ್ರಿಂಕ್ಸ್ ನ್ನು ಮನಬಂದಂತೆ ತೆಗೆದು ಕುಡಿದಿದ್ದರು.
ಸಮಾವೇಶದಲ್ಲಿ ಬಿಸಿಲ ಬೇಗೆಗೆ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡದ ಕಾರಣ ಜನರೆಲ್ಲ ಮಾರಾಟಕ್ಕಿಟ್ಟ ಬಂದಿರುವ ಪಾನೀಯ, ತಮಗಾಗಿ ಬಂದಿದ್ದು, ಫ್ರೀ ಇರಬಹುದು ಎಂದು ಮುಗಿಬಿದ್ದು, ಆ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಇದರಿಂದ ವ್ಯಾಪಾರಿ ಸಮೀರ್ ಗೆ ಜನರ ಅವಿವೇಕ ಹಾಗೂ ಅತಿರೇಕದ ವರ್ತನೆಯಿಂದಾಗಿ 35,000 ರೂ.ನಷ್ಟವಾಗಿತ್ತು.
ಪರಿಸ್ಥಿತಿನ್ನು ನಿಭಾಯಿಸಲು ಸಾಧ್ಯವಾಗದೇ, ಹಸನ್ ಅಳಲು ಶುರು ಮಾಡಿದ್ದ. ಆಗ ಪೊಲೀಸರು, ನೀನು ಇಲ್ಲಿಂದ ಹೊರಡು ಎಂದು ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.
ಬಿಜೆಪಿಯ ಅವಾಂತರಕ್ಕೆ ಪಾಪ ಬಡ ಹುಡುಗ 35 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ ಎಂದು ವಿಪಕ್ಷಗಳು ಕೂಡ ಹರಿಹಾಯ್ದಿದ್ದವು.ಇದನ್ನು ಗಮನಿಸಿದ್ದ ಸಂಸದ ಪ್ರತಾಪ್ ಸಿಂಹ, ಇಂದು ಹಸನ್‌ಗೆ 35 ಸಾವಿರ ರೂಪಾಯಿ, ಟ್ರಾನ್ಸಫರ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ, ಸಂಸದ ಪ್ರತಾಪ್ ಸಿಂಹ, ಸಮೀರ್ ಹಸನ್ ಸಾಬ್ ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿ ವ್ಯಾಪಾರಿ ಸಮೀರ್, ಅಮಿತ್ ಶಾ ಕಾರ್ಯಕ್ರಮಕ್ಕೆ ಪೌಚ್ ಬೇಕಾಗಿದೆ ಅಂತ ಆರ್ಡರ್ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಗದ್ದಲ ಇದ್ದಿದ್ದರಿಂದ ಅಲ್ಲಿಗೆ ಹೋಗಿರಲಿಲ್ಲ. ಆದರೆ, ಬಿಜೆಪಿ ಮುಖಂಡರು ಪದೇ ಪದೆ ಕಾಲ್ ಮಾಡಿದ್ದಕ್ಕೆ ನಾನು ಹೋಗಬೇಕಾಯಿತು. ಆದರೆ, ಅಲ್ಲಿಗೆ ಹೋಗುತ್ತಿದ್ದಂತೆ ಕೂಲ್ ಡ್ರಿಂಕ್ಸ್ ಎಲ್ಲ ಫ್ರೀ ಬಂದಾವು ಅಂತ ಜನರೆಲ್ಲ ತೆಗೆದುಕೊಂಡು ಹೋದರು. ನನಗೆ ಸುಮಾರು 35 ಸಾವಿರ ರೂಪಾಯಿ ನಷ್ಟ ಆಗಿತ್ತು. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ಅಂದು ರಾತ್ರಿಯೇ ನನ್ನ ಬಳಿಗೆ ಬಂದು 20 ಸಾವಿರ ರೂಪಾಯಿ ನೀಡಿದರು.ಇದೀಗ ಪ್ರತಾಪ್ ಸಿಂಹ ಅವರು 35,000 ರೂ.ನೀಡಿದ್ದಾರೆ ಎಂದು ಹೇಳಿದ್ದಾರೆ.ಹೆಚ್ಚಿನ ಹಣವನ್ನು ವೃದ್ಧಾಶ್ರಮಕ್ಕೆ ಕೊಡುವುದಾಗಿ ಹೇಳಿದ್ದಾರೆ.