ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು ಕಾಂಗ್ರೆಸ್ 97 ಕ್ಷೇತ್ರಗಳಲ್ಲಿ ಮುಂದುವರಿಕೆ ಕಾಯ್ದುಕೊಂಡಿದೆ.
ಬಿಜೆಪಿ 78 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್ 22 ಕ್ಷೇತ್ರದಲ್ಲಿ ಹಾಗೂ ಇತರರು 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.ಅಂಚೆ ಮತಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆಯಾಗಿದೆ.
ಜೆಡಿಎಸ್ ನ 13 ಮಂದಿ ಮಂಚೂಣಿಯಲ್ಲಿದ್ದಾರೆ. ಮಿಥುನ್ ರೈ , ರಮಾನಾಥ ರೈ, ಕೆ.ಹೆಚ್ ಮುನ್ನಿಯಪ್ಪ ಮುನ್ನಡೆ ಸಾಧಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದಾರೆ.
ವರುಣದಲ್ಲಿ ಸೋಮಣ್ಣಗೆ ಹಿನ್ನಡೆಯಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.