ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿನ ಹಿಂದಿದೆ ದಕ್ಷಿಣ ಕನ್ನಡದ ಮಾಜಿ ಡಿಸಿ ಶಶಿಕಾಂತ ಸೆಂಥಿಲ್ ಪಾತ್ರ!

ಬೆಂಗಳೂರು;ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದೆ.ಕಾಂಗ್ರೆಸ್ ನ ಈ ಅಭೂತಪೂರ್ವ ಗೆಲುವಿಗೆ ಸೋನಿಯಾ ಗಾಂಧಿಯ ಹಾದಿಯಿಂದ ಹಿಡಿದು ಸಾಮಾನ್ಯ ಕೈ ಕಾರ್ಯಕರ್ತನವರೆಗೆ ಹಲವರು ಕೆಲಸ ಮಾಡಿದ್ದಾರೆ.

ಕಾಂಗ್ರೆಸ್‌ನ ಈ ಐತಿಹಾಸಿಕ ಗೆಲುವಿನ ಹಿಂದೆ ಮಾಜಿ ಐಎಎಸ್‌ ಅಧಿಕಾರಿ, ಕಾಂಗ್ರೆಸ್‌ ವಾರ್ ರೂಮ್‌ನ ಮುಖ್ಯಸ್ಥ ಶಶಿಕಾಂತ ಸೆಂಥಿಲ್ ಪಾತ್ರವೂ ಇದೆ.ಕಾಂಗ್ರೆಸ್‌ ಪಕ್ಷ ಎಡವದಂತೆ ಕೆಲಸ ಮಾಡುವಲ್ಲಿ ಇವರ ತಂಡದ ಪಾತ್ರವೂ ಇದೆ.

ಸೆಂಥಿಲ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿಸಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಇದರಿಂದಾಗಿಯೇ ಇವರನ್ನು ವಾರ್ ರೂಂ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು.

ಕಾಂಗ್ರೆಸ್‌ ಗ್ಯಾರಂಟಿ ಸಿದ್ಧತೆ, ಪ್ರಣಾಳಿಕೆಯಲ್ಲಿ
ಸೆಂಥಿಲ್‌ ಅವರ ಪಾತ್ರ ಕೂಡ ಇತ್ತು.ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಯೋಜನೆ ರೂಪಿಸುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.

ಜನರಿಂದ ಅಭಿಪ್ರಾಯ ಪಡೆದು, ಯೋಜನೆ ರೂಪಿಸಿ, ಹೈಕಮಾಂಡ್‌ ಅನುಮತಿ ಪಡೆದು ಅದನ್ನು ಜಾರಿ ಮಾಡುವ ಜಬಾಬ್ದಾರಿ ಸೆಂಥಿಲ್‌ ಅವರ ತಂಡಕ್ಕೆ ಇತ್ತು.

ಸೆಂಥಿಲ್ ಕಾಂಗ್ರೆಸ್‌ ವಾರ್‌ ರೂಮ್‌ ಅನ್ನು ವ್ಯವಸ್ಥಿತವಾಗಿ ರೂಪಿಸಿದ್ದರು.ಎದುರಾಳಿಗಳ ಟೀಕೆಗೆ ಸಮರ್ಥ ತಿರುಗೇಟು ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ, ಮಾಧ್ಯಮ ನಿರ್ವಹಣೆ, ನಾಯಕರ ಸಮನ್ವಯತೆಯ ಎಲ್ಲವೂ ವಾರ್‌ ರೂಂನಿಂದಲೇ ಅಂತಿಮಗೊಳ್ಳುತ್ತಿತ್ತು.

ಬಜರಂಗದಳ ಬ್ಯಾನ್ ಕುರಿತ ಅಸ್ಪಷ್ಟ‌ ಮಾಹಿತಿ ಪ್ರಣಾಳಿಕೆಯಲ್ಲಿ ಉಲ್ಲೇಖದ ಹಿಂದೆ ಸೆಂಥಿಲ್ ತಂಡ ಕೆಲಸ ಮಾಡಿದೆ ಎನ್ನಲಾಗಿದೆ.ಇದರಿಂದ ಮೈಸೂರು, ಮಂಡ್ಯ ಭಾಗದಲ್ಲಿ ಕಾಂಗ್ರೆಸ್ ಮುಸ್ಲಿಮರ ಮತ ಸೆಳೆಯಲು ಯಶಸ್ವಿಯಾಗಿದೆ.

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com