ಕಾಂಗ್ರೆಸ್ ಪಾದಯಾತ್ರೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ ಕೇಸ್ ಗೆ ಟ್ವಿಸ್ಟ್
ಕೋಲಾರ:ಕಾಂಗ್ರೆಸ್ ಪಾದಯಾತ್ರೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು,ಪೊಲೀಸರು ಅನಾಥ ಶವವೆಂದು ಆತನಿಗೆ ಅಂತ್ಯಸಂಸ್ಕಾರ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆ.16ರಂದು ಅನಾಥ ಶವವೆಂದು ಬೆಂಗಳೂರು ಹೊಸಕೋಟೆ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದರು.ಆದರೆ ಈಗ ಮಾಹಿತಿ ತಿಳಿದು ಕುಟುಂಬಸ್ಥರು ಠಾಣೆಗೆ ಭೇಟಿ ನೀಡಿದ್ದಾರೆ.
75ನೇ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಕಾಂಗ್ರೇಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ 47 ವರ್ಷದ ಗೋವಿಂದಪ್ಪ ತೆರಳಿದ್ದರು.ಆದರೆ ಅಂದಿನಿಂದ ಆತನ ಸುಳಿವೇ ಸಿಕ್ಕಿರಲಿಲ್ಲ ನಿಗೂಡವಾಗಿ ಕಾಣೆಯಾಗಿದ್ದ,ಪಾದಯಾತ್ರೆಯಲ್ಲಿ ಭಾಗಿಯಾಗಿ ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬಸ್ಥರು ಆತಂಕಗೊಂಡಿದ್ದರು.ಗೋವಿಂದಪ್ಪ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿತಲ್ಲದೆ,ಆತನ ಬರುವಿಕೆಗಾಗಿ ಕಾದು ಕುಳಿತಿದ್ದರು.ಎರಡು ಮೂರು ದಿನ ನೋಡಿ ಆಗಸ್ಟ್-18 ರಂದು ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಗೆ ಕಾಣೆಯಾಗಿರುವ ಕುರಿತು ದೂರು ನೀಡಲಾಗಿತ್ತು.
ಈ ನಡುವೆ ಹೊಸಕೋಟೆ ಪೊಲೀಸರು ಕಾಣಿಯಾಗಿದ್ದ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.ಆದರೆ ಕುಟುಂಬಸ್ಥರು ಮೃತದೇಹ ಕೊಡುವಂತೆ ಪಟ್ಟು ಹಿಡಿದಿದ್ದಾರೆ.