ಹಣದ ರಾಶಿಯ ಮುಂದೆ ಕುಳಿತುಕೊಂಡ ಶಾಸಕ: ವಿಡಿಯೋ ವೈರಲ್

ಹಣದ ರಾಶಿಯ ಮುಂದೆ ಕುಳಿತುಕೊಂಡ ಶಾಸಕ: ವಿಡಿಯೋ ವೈರಲ್

ಛತ್ತೀಸ್‌ಗಢ; ಕಾಂಗ್ರೆಸ್ ಶಾಸಕರೊಬ್ಬರು ಹಣದ ರಾಶಿಯ ಮುಂದೆ ಕುಳಿತಿರುವ ವೀಡಿಯೊ ವೈರಲ್ ಆಗಿದೆ.

ಶಾಸಕ ರಾಮ್‌ ಕುಮಾರ್ ಯಾದವ್ ಹಾಸಿಗೆಯ ಪಕ್ಕದಲ್ಲಿ ಸೋಫಾದಲ್ಲಿ ಕುಳಿತಿದ್ದು, ಅದರ ಪಕ್ಕದಲ್ಲೇ ನೋಟುಗಳ ಕಂತೆಗಳನ್ನು ಇಡಲಾಗಿದೆ.

ವಿಡಿಯೋ ವೈರಲ್ ಬೆನ್ನಲ್ಲೆ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಛತ್ತೀಸ್‌ಗಢ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕಾಂಗ್ರೆಸ್ ಛತ್ತೀಸ್‌ಗಢವನ್ನು ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಯಾದವ್ ಪ್ರತಿಕ್ರಿಯಿಸಿ, ನಾನು ಬಡ ಕುಟುಂಬದಿಂದ ಬಂದಿರುವ ಕಾರಣ ನನ್ನ ಇಮೇಜ್‌ಗೆ ಧಕ್ಕೆ ತರಲು ಹೀಗೆ ಮಾಡಿದ್ದಾರೆ. ನಾನು ಶಾಸಕನಾಗಿರುವುದನ್ನು ಒಪ್ಪಿಕೊಳ್ಳದ ಕೆಲವರ ಪಿತೂರಿ ಇದಾಗಿದೆ. ನಾನು ವಿಮಾನ, ದೊಡ್ಡ ಅರಮನೆ ಬಳಿ ಫೋಟೋ ತೆಗೆಸಿಕೊಂಡರೆ ನಾನು ಅದರ ಮಾಲೀಕನಾಗುತ್ತೇನೆಯೇ? ಎಂದು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್