ಬೆಂಗಳೂರು:ಸಚಿವ ಸಂಪುಟಕ್ಕೆ ಭಾರೀ ಕಸರತ್ತು ನಡೆದು ಕೊನೆಗೆ ಕಾಂಗ್ರೆಸ್ 24 ಮಂದಿ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ನೂತನ ಸಚಿವರ ಪಟ್ಟಿ ರಾಜಭವನಕ್ಕೆ ರವಾನೆಯಾಗಿದೆ. ನೂತನ ಸಚಿವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 10 ಮಂದಿ ಸಂಪುಟದಲ್ಲಿದ್ದು, 34 ಸದಸ್ಯ ಬಲದ ಸಂಪುಟದಲ್ಲಿ ಹಾಲಿ 24 ಸ್ಥಾನಗಳು ಖಾಲಿ ಇತ್ತು. ಸಚಿವ ಸಂಪುಟ ಸೇರ್ಪಡೆಗೆ ಕಸರತ್ತಿನ ಬೆನ್ನಲ್ಲೇ 24 ಸ್ಥಾನಗಳಿಗೂ ಸಚಿವರ ನೇಮಕ ನಡೆದಿದೆ.
ದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್, ಸೋನಿಯಾಗಾಂಧಿ, ರಾಹುಲ್ , ಪ್ರಿಯಾಂಕ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸರಣಿ ಸಭೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಸಂಪುಟ ಸೇರ್ಪಡೆ ಕಸರತ್ತಿನ ನಡುವೆ ಕೆಲ ಹಿರಿಯರಿಗೆ ಅವಕಾಶ ತಪ್ಪಿದೆ.ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿ.ಕೆ. ಹರಿಪ್ರಸಾದ್ ಗೆ ಸಚಿವ ಸ್ಥಾನ ಕೈತಪ್ಪಿದೆ.
ನೂತನ ಸಚಿವರ ಪಟ್ಟಿ…
ಕೆ.ಎನ್.ರಾಜಣ್ಣ
ಪಿರಿಯಾಪಟ್ಟಣ ವೆಂಕಟೇಶ್
ಕೃಷ್ಣಬೈರೇಗೌಡ
ಡಾ.ಎಚ್.ಸಿ.ಮಹದೇವಪ್ಪ
ಸಂತೋಷ್ ಲಾಡ್
ಭೈರತಿ ಸುರೇಶ್
ಪುಟ್ಟರಂಗ ಶೆಟ್ಟಿ
ಈಶ್ವರ್ ಖಂಡ್ರೆ
ರಹೀಂಖಾನ್
ಶಿವರಾಜ್ ತಂಗಡಗಿ
ಮಧು ಬಂಗಾರಪ್ಪ
ಡಿ.ಸುಧಾಕರ್
ಚೆಲುವರಾಯಸ್ವಾಮಿ
ಮಂಕಾಳ ವೈದ್ಯ
ಎಂ.ಸಿ.ಸುಧಾಕರ್
ಲಕ್ಷ್ಮಿ ಹೆಬ್ಬಾಳ್ಕರ್
ಶರಣಪ್ರಕಾಶ್ ಪಾಟೀಲ್
ರುದ್ರಪ್ಪ ಲಮಾಣಿ
ಶಿವಾನಂದ ಪಾಟೀಲ್
ಎಸ್.ಎಸ್.ಮಲ್ಲಿಕಾರ್ಜುನ್
-ಶರಣಬಸಪ್ಪ ದರ್ಶನಾಪೂರ
-ಬೋಸರಾಜು (ವಿಧಾನ ಪರಿಷತ್ ಸದಸ್ಯ)
-ಎಚ್. ಕೆ. ಪಾಟೀಲ್
-ಬಿ.ನಾಗೇಂದ್ರ