ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಖಾಸಗಿ ಹೋಟೆಲ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸರ್ವಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಬದ್ಧತೆ ಈ ಘೋಷ ವಾಕ್ಯದೊಂದಿಗೆ ಪ್ರಣಾಳಿಕೆ ತಯಾರು ಮಾಡಲಾಗಿದೆ.
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನ ಪ್ರಣಾಳಿಕೆ ಜನರಿಗೆ ಸಾಕಷ್ಟು ರಿಲೀಫ್ ಕೊಡಲಿದೆ. ನಾವು ಏನು ಹೇಳುತ್ತೇವೆ. ಅದನ್ನು ಮಾಡುತ್ತೇವೆ. ನಾವು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನಮ್ಮ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
ಬಿಎಪಿಲ್ ಕಟುಂಬಕ್ಕೆ ಪ್ರತಿ ತಿಂಗಳು 10 ಕೆಜಿ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ವಿದ್ಯುತ್ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ.ನೀಡಲಾಗುವುದು, ಯುವನಿಧಿ, ನಿರುದ್ಯೋಗ ಭತ್ಯೆ, ಪದವೀಧರರಿಗೆ 3,000 ರೂ. ಡಿಪ್ಲೋಮಾ ಪಡೆದವರಿಗೆ 1,500 ರೂ. ನೀಡುವುದಾಗಿ ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತರ ಗೌರವ ಧನ 15,000 ಕ್ಕೆ ಹೆಚ್ಚಳ, ಭಜರಂಗದಳ, ಪಿಎಫ್ ಐ ನಿಷೇಧ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರ ಖಾಯಂ,
ಮೈಸೂರಿನಲ್ಲಿ 500 ಕೋಟಿ ಬಜೆಟ್‌ನೊಂದಿಗೆ ವಿಶ್ವದರ್ಜೆಯ ಡಾ. ರಾಜ್ ಕುಮಾರ್ ಫಿಲ್ಮ್ ಸಿಟಿ ನಿರ್ಮಾಣ
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ರೂ 5 ಸಾವಿರ ಕೋಟಿ ಮೀಸಲು
ಮಹಾರಾಷ್ಟ್ರ ಗಡಿಭಾಗದ ಎಲ್ಲಾ ಕನ್ನಡ ಶಾಲೆಗಳಿಗೆ ಒಂದು ಬಾರಿಯ ಮೂಲಸೌಲಭ್ಯ ದೇಣಿಗೆಯಾಗಿ 1 ಕೋಟ ರೂ ಹಾಗೂ ಮಾಸಿಕ 1 ಲಕ್ಷ ಸಬ್ಸಿಡಿ ಮತ್ತು ಶಿಕ್ಷಕರ ನೇಮಕಾತಿ
ಪೊಲೀಸ್ ವ್ಯವಸ್ಥೆಯಲ್ಲಿ ಶೇ.33ರಷ್ಟು ಮಹಿಳೆ ಇರುವಂತೆ ನೇಮಕಾತಿ. ಕನಿಷ್ಠ ಶೇ.1ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿ
ರೈತರಿಗೆ ಬಡ್ಡಿ ರಹಿತ ಸಾಲ 3 ಲಕ್ಷದಿಂದ 10 ಲಕ್ಷದವರೆಗೆ ವಿಸ್ತರಣೆ
ಗ್ರಾಮೀಣ ಕೃಷಿಕ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ
ಪಶುಭಾಗ್ಯ- ಹಸು/ ಎಮ್ಮೆ ಖರೀದಿಗೆ ಬಡ್ಡಿರಹಿತ 3 ಲಕ್ಷ ಸಾಲ
ಪ್ರತಿ ಕ್ಷೇತ್ರದಲ್ಲಿ ಶಿತಲೀಕರಣ ಘಟಕ ಸ್ಥಾಪನೆ
ಬಿಜೆಪಿ ತಂದಿರುವ ಕೃಷಿ ಕಾಯ್ದೆಗಳು ರದ್ಧು
ಎಪಿಎಂಸಿ ಕಾಯ್ದೆ ರದ್ಧು ಪಡಿಸುತ್ತೇವೆ
ರೈತರ ಮೇಲಿನ ಎಲ್ಲಾ ಕೇಸ್ ವಾಪಸ್