ಬೆಂಗಳೂರು;ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಕೊನೆಗೂ ಬಿಡುಗಡೆ ಮಾಡಿದೆ.ಪಟ್ಟಿಯಲ್ಲಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಭಾರೀ ಕುತೂಹಲ ಮೂಡಿಸಿದ್ದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಕೊನೆಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಹೆಸರನ್ನು ಅಂತಿಮಗೊಳಿಸಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೊಷಿಸಿದೆ.
ಇನಾಯತ್ ಅಲಿಗೆ ಟಿಕೆಟ್ ಘೋಷಣೆ ಬಳಿಕ ಮಾಜಿ ಶಾಸಕ ಮೊಯ್ದೀನ್ ಬಾವಾಗೆ ನಿರಾಶೆಯಾಗಿದೆ.ಬಾವಾ ಕೊನೆಯವರೆಗೂ ಟಿಕೆಟ್ ಗಾಗಿ ಪ್ರಯತ್ನಗಳನ್ನು ನಡೆಸುತ್ತಿದ್ದರು.ಅವರ ಮುಂದಿನ ನಡೆ ಬಗ್ಗೆ ಇದೀಗ ಕುತೂಹಲ ಮೂಡಿಸಿದೆ.
ರಾಯಚೂರಿನಲ್ಲಿ ಮುಹಮ್ಮದ್ ಷಾ ಆಲಂ, ಶಿಡ್ಲಘಟ್ಟದಲ್ಲಿ ಜಿ.ವಿ. ರಾಜಿವ್ ಗೌಡ, ಸಿವಿ ರಾಮನ್‌ನಗರದಲ್ಲಿ ಎಸ್. ಆನಂದ್ ಕುಮಾರ್, ಅರಕಲಗೂಡಿನಲ್ಲಿ ಎಚ್.ಪಿ. ಶ್ರೀಧರ ಗೌಡ ಅವರ ಹೆಸರುಗಳನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ಇನ್ನು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದ ಹಿನ್ನೆಲೆ ಇಂದು ಇನಾಯತ್ ಅಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೇ ಎಂದು ತಿಳಿದು ಬಂದಿದೆ.