ಬನ್ನಿ ನಳಿನ್ ಕುಮಾರ್ ಕಟೀಲ್ ಅವರೇ ನಿಮ್ಮ ಪಕ್ಷದವರ ಲವ್ ಜಿಹಾದ್ ಬಗ್ಗೆ ಮಾತಾಡೋಣ-ಕಾಂಗ್ರೆಸ್ ಆಹ್ವಾನ

ಬೆಂಗಳೂರು;ರಸ್ತೆ, ಚರಂಡಿ, ಅಭಿವೃದ್ಧಿ ಬಗ್ಗೆ ಮಾತಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ” ಎಂದು ಹೇಳಿಕ ನೀಡಿದ್ದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಬನ್ನಿ ನಳಿನ್ ಕುಮಾರ್ ಅವರೇ ನಿಮ್ಮ ಪಕ್ಷದವರ ಲವ್ ಜಿಹಾದ್ ಬಗ್ಗೆ ಮಾತಾಡೋಣ ಎಂದು ಆಹ್ವಾನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಪ್ರೀತಿ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದು, ಅತ್ಯಾಚಾರ ಮಾಡುವ ಟ್ರೈನಿಂಗ್‌ನ್ನು
ಬಿಜೆಪಿ ಕಚೇರಿಯಲ್ಲಿ ನೀಡಲಾಗುತ್ತದೆಯೇ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಪ್ರಶ್ನಿಸಿದೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಹೆಸರು ಬರೆದಿಟ್ಟು ಬಾಲಕಿ ಆತ್ಮಹತ್ಯೆ‌ ಕುರಿತು ಸುದ್ದಿಯನ್ನು ಹಂಚಿಕೊಂಡು ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡಿದೆ.

ಟಾಪ್ ನ್ಯೂಸ್