BREAKING ಕಾಂಗ್ರೆಸ್ ನ ಖಾತೆ ಓಫನ್, ಕೂಡ್ಲಿಗೆ, ಚಾಮರಜಪೇಟೆ, ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆಲುವು, ದಕ್ಷಿಣ ಕನ್ನಡದ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ, ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲಗೆ ಮುನ್ನಡೆ

ಬೆಂಗಳೂರು;ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ.ದಕ್ಷಿಣ ಕನ್ನಡದ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಇದೆ.

ಸುಳ್ಯ ಕ್ಷೇತ್ರದಲ್ಲಿ ಭಗೀರಥಿ ಮುರಳ್ಯ ಮುನ್ನಡೆ ಸಾಧಿಸಿದ್ದಾರೆ‌.ಕಾಂಗ್ರೆಸ್ ನ ಕೃಷ್ಣಪ್ಪಗೆ ಹಿನ್ನೆಡೆಯಾಗಿದೆ.

ಬಂಟ್ವಾಳದಲ್ಲಿ ರಾಜೇಶ್ ನಾಯಕ್ ಗೆ ಮುನ್ನಡೆಯಾಗಿದ್ದು, ರಮಾನಾಥ್ ರೈಗೆ ಹಿನ್ನಡೆಯಾಗಿದೆ.ಪುತ್ತೂರಿನಲ್ಲಿ ಪುತ್ತಿಲ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾಗೆ ಮುನ್ನಡೆಯಾಗಿದ್ದು, ರಕ್ಷಿತ್ ಶಿವರಾಂಗೆ ಹಿನ್ನೆಡೆಯಾಗಿದೆ.

ಮುರುಗೇಶ್ ನಿರಾಣಿ, ಬಿಸಿ ಪಾಟೀಲ್ , ಡಾ.ಸುಧಾಕರ್ ಸೇರಿ 11 ಮಂದಿ ಹಾಲಿ ಸಚಿವರಿಗೆ ಹಿನ್ನೆಡೆಯಲ್ಲಿದ್ದಾರೆ.

ಮುಧೋಳದಲ್ಲಿ ಗೋವಿಂದ ಕಾರಜೋಳ ಅವರಿಗೆ ಹಿನ್ನೆಡೆಯಾಗಿದೆ. ಚೆನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಮುನ್ನಡೆ, ಬಿ.ಸಿ ನಾಗೇಶ್ ಗೆ ಹಿನ್ನೆಡೆಯಾಗಿದೆ. ಗಂಗಾವತಿಯಲ್ಲಿ ಜನಾರ್ಧನ ರೆಡ್ಡಿಗೆ ಭಾರೀ ಮುನ್ನೆಡೆಯಾಗಿದೆ.ಜಮೀರ್ ಅಹ್ಮದ್ ಗೆ ಮುನ್ನಡೆಯಾಗಿದೆ.ಜಗದೀಶ್ ಶೆಟ್ಟರ್ ಗೆ ಹುಬ್ಬಳ್ಳಿಯಲ್ಲಿ ಹಿನ್ನೆಡೆಯಾಗಿದೆ.

ಕೊಳ್ಳೇಗಾಲದಲ್ಲಿ ಎನ್ ಮಹೇಶ್ ಗೆ 14,000 ಮತಗಳ ಹಿನ್ನೆಡೆಯಾಗಿದೆ. ಕೈ ಅಭ್ಯರ್ಥಿ ಕೃಷ್ಣಮೂರ್ತಿಗೆ ಬಾರೀ ಮುನ್ನಡೆ ಸಾಧಿಸಿದೆ.

ಹಾಸನದಲ್ಲಿ ಬಿಜೆಪಿಯ ಪ್ರೀತಂಗೌಡ ಹಿನ್ನಡೆ, ದರ್ಶನ್ ಪುಟ್ಟಣ್ಣಯ್ಯಗೆ ಮುನ್ನಡೆ, ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಮುನ್ನೆಡೆ, 2ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಇನಾಯತ್ ಅಲಿ ಅವರು ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿಗಿಂತ 1099 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನಾಯತ್ ಅಲಿ 10371 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಭರತ್ ಶೆಟ್ಟಿ 9272 ಮತಗಳನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಶೋಕ್ ರೈಗೆ ಮುನ್ನಡೆಯಾಗಿದೆ.ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾಗೆ ಮುನ್ನಡೆಯಾಗಿದೆ.

ಸಿಎಂ ಬೊಮ್ಮಯಿಯ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ.ಸಿಟಿ ರವಿಗೆ ಚಿಕ್ಕಮಗಳೂರಿನಲ್ಲಿ ಭಾರೀ ಹಿನ್ನೆಡೆಯಾಗಿದೆ.ಕಾಂಗ್ರೆಸ್ ನ ತಮ್ಮಯ ಮುಂದುವರಿಕೆ ಮುಂದುವರಿದಿದೆ.ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್ ಗೆ ಹಿನ್ನೆಡೆಯಾಗಿದೆ.

ಈಗ 115 ಕ್ಷೇತ್ರಗಳ್ಲಲ್ಲಿ ಕಾಂಗ್ರೆಸ್, 72 ಕ್ಷೇತ್ರಗಳಲ್ಲಿ ಬಿಜೆಪಿ, 30 ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com