ಫೆ.14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರೇಮಿಗಳ ದಿನವನ್ನು ವಿಶೇಷವಾಗಿ ಜನರು ಆಚರಿಸುತ್ತಾರೆ. ಥೈಲ್ಯಾಂಡ್ ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಸಲುವಾಗಿ 95 ಮಿಲಿಯನ್ ಉಚಿತ ಕಾಂಡೋಮ್‌ಗಳನ್ನು
ಹಂಚಿಕೆ ಮಾಡಲು ಮುಂದಾಗಿದೆ.
ಈ ಕುರಿತು ಥೈಲ್ಯಾಂಡ್ ಸರ್ಕಾರದ ವಕ್ತಾರರಾದ ರಚಡಾ ಧ್ನಾದಿರೇಕ್ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದು, ಥೈಲ್ಯಾಂಡ್ನ ಸಾರ್ವತ್ರಿಕ ಹೆಲ್ತ್‌ಕೇರ್ ಕಾರ್ಡ್‌ದಾರರು ವಾರಕ್ಕೆ 10 ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಎಲ್ಲ ಆಸ್ಪತ್ರೆಗಳ ಔಷಧಾಲಯಗಳು ಮತ್ತು ಪ್ರಾಥಮಿಕ ಆರೈಕೆ ಘಟಕಗಳಿಂದ ಕಾಂಡೋಮ್‌ಗಳನ್ನು ಪಡೆದುಕೊಳ್ಳಬಹುದು ಎಂದು ವಕ್ತಾರರು ಹೇಳಿದ್ದಾರೆ.
ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಉಚಿತ ಕಾಂಡೋಮ್ ನೀಡುವ ಅಭಿಯಾನವು ಲೈಂಗಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ರಾಚಡಾ ಹೇಳಿದ್ದಾರೆ.