ನಮಾಝ್ ಮಾಡಲು‌ ಬಸ್ ನಿಲ್ಲಿಸಿ ಅಮಾನತ್ತಾಗಿದ್ದ ಕಂಡೆಕ್ಟರ್ ಆತ್ಮಹತ್ಯೆ

ನಮಾಝ್ ಮಾಡಲು‌ ಬಸ್ ನಿಲ್ಲಿಸಿ ಅಮಾನತ್ತಾಗಿದ್ದ ಕಂಡೆಕ್ಟರ್ ಆತ್ಮಹತ್ಯೆ

ಉತ್ತರಪ್ರದೇಶ;ಮುಸ್ಲಿಂ ಪ್ರಯಾಣಿಕರಿಗೆ ನಮಾಝ್ ಮಾಡಲು ಬಸ್‌ನ್ನು ನಿಲ್ಲಿಸಿ ಅಮಾನಾತಾಗಿದ್ದ ಬಸ್ ಕಂಡೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯ ಪಕ್ಕದಲ್ಲಿರುವ ರೈಲ್ವೇ ಟ್ರಾಕ್‌ನಲ್ಲಿ ಕಂಡೆಕ್ಟರ್ ಮೋಹಿತ್ ಯಾದವ್ ಅವರ ಮೃತದೇಹ ಪತ್ತೆಯಾಗಿದೆ.

ಬಸ್ ಕಂಡಕ್ಟರ್ ಸಾವನ್ನು ಖಂಡಿಸಿ ಬರೇಲಿಯಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಕೌಶಂಬಿಯಿಂದ ದೆಹಲಿಗೆ ತೆರಳುತ್ತಿದ್ದ UPSRTC ಬಸ್‌ನಲ್ಲಿ ಮೋಹಿತ್ ಯಾದವ್ (32) ಕಂಡಕ್ಟರ್ ಆಗಿದ್ದರು.

ದೆಹಲಿಯಿಂದ ಕೌಶಂಬಿಗೆ ತೆರಳುವಾಗ ರಾಂಪುರ ಬಳಿ ಮುಸ್ಲಿಂ ಪ್ರಯಾಣಿಕರಿಗೆ ನಮಾಝ್‌ ಮಾಡಲು ಎರಡು ನಿಮಿಷಗಳ ಕಾಲ ಬಸ್ ನಿಲ್ಲಿಸಿದ್ದರು.ಇದಕ್ಕೆ ಸಹಪ್ರಯಾಣಿಕರು ಆಕ್ಷೇಪಿಸಿ ವಿಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು‌.

ಇದರ ಬೆನ್ನಲ್ಲೇ ಬಸ್‌ ಚಾಲಕ ಹಾಗೂ ಕಂಡಕ್ಟರ್‌ ನ್ನು ಅಮಾನತುಗೊಳಿಸಲಾಗಿತ್ತು.ಇದರಿಂದ ಒತ್ತಡಕ್ಕೆ ಒಳಗಾಗಿದ್ದ ಮೋಹಿತ್‌ ಕೆಲಸ ಇಲ್ಲದೆ ಹಣಕಾಸಿನ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್