ಮಹಿಳಾ ಆಯುಕ್ತರ ಸಾಕು ನಾಯಿಗಾಗಿ ಮನೆಮನೆಗೆ ನುಗ್ಗಿದ ಪೊಲೀಸರು; 500ಕ್ಕೂ ಅಧಿಕ ಕಡೆಗಳಲ್ಲಿ ಶೋಧ!

ಮಹಿಳಾ ಆಯುಕ್ತರ ಸಾಕು ನಾಯಿಗಾಗಿ ಮನೆಮನೆಗೆ ನುಗ್ಗಿದ ಪೊಲೀಸರು; 500ಕ್ಕೂ ಅಧಿಕ ಕಡೆಗಳಲ್ಲಿ ಶೋಧ!

ಮೀರತ್​: ಮೀರತ್ ಕಮಿಷನರ್ ಅವರ ಸಾಕು ನಾಯಿ ಭಾನುವಾರ ಸಂಜೆ ನಾಪತ್ತೆಯಾದ ನಂತರ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೀರತ್ ಕಮಿಷನರ್ ಸೆಲ್ವ ಕುಮಾರಿ ಜೆ ಅವರ ಮುದ್ದಿನ ನಾಯಿ, ಸೈಬೀರಿಯನ್ ಹಸ್ಕಿ ತಳಿಯನಾಯಿ ಕೊನೆಗೂ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ನಾಯಿಯ ಫೋಟೋಗಳ ಸಹಾಯದಿಂದ 500 ಕ್ಕೂ ಹೆಚ್ಚು ಮನೆಗಳನ್ನು ಶೋಧಿಸಿ ನೂರಾರು ಜನರಿಗೆ ತೋರಿಸಿ, ನಾಯಿ ಕಾಣೆಯಾದ ಬಗ್ಗೆ ಕೇಳಿದರು. ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ನಾಯಿಗಾಗಿ ಶೋಧಕಾರ್ಯ ಮುಂದುವರಿದಿತ್ತು.

ಆಯುಕ್ತೆ ಸೆಲ್ವಾ ಕುಮಾರಿ ಅವರು ಪ್ರೀತಿಯಿಂದ ಸಾಕಿದ ಈ ನಾಯಿ ಹೆಸರು ಇಕೊ. ಭಾನುವಾರ ಸಂಜೆ 6ಗಂಟೆಯಿಂದ ಇದು ನಾಪತ್ತೆಯಾಗಿದೆ. ಪೊಲೀಸ್ ಆಯುಕ್ತರ ಮನೆಯಲ್ಲಿ ನಿಯೋಜಿತರಾಗಿರುವ ಸಿಬ್ಬಂದಿ ಎಲ್ಲ ಸೇರಿ ಇಕೊನನ್ನು ಹುಡುಕಿದ್ದಾರೆ.

ಇನ್ನು ನಾಯಿ ಕಾಣೆಯಾಗುತ್ತಿದ್ದಂತೆ ಆಯುಕ್ತರ ಮನೆಯಲ್ಲಿ ಗೊಂದಲ-ಗಡಿಬಿಡಿ ಉಂಟಾಗಿತ್ತು. ಭಾನುವಾರ ಮಧ್ಯರಾತ್ರಿಯೇ, ಮುನ್ಸಿಪಲ್ ಕಾರ್ಪೋರೇಶನ್​ನ ಪ್ರಾಣಿ ಕಲ್ಯಾಣ ಅಧಿಕಾರಿ ಡಾ. ಹರ್ಪಾಲ್​ ಸಿಂಗ್​ ಅವರು ಆಯುಕ್ತರ ಮನೆಗೆ ತಲುಪಿದರು. ನಾಯಿಯ ಫೋಟೋ ಮತ್ತು ಮಾಹಿತಿಯನ್ನು ತೆಗೆದುಕೊಂಡರು. ಅಲ್ಲಿಂದಲೇ ಹುಡುಕಾಟವೂ ಶುರುವಾಯಿತು. ಇನ್ನೊಂದೆಡೆ ಪೊಲೀಸರು ಅಗತ್ಯ ಸ್ಥಳಗಳಲ್ಲಿ ಹಾಕಲಾದ ಸಿಸಿಟಿವಿ ಕ್ಯಾಮರಾಗಳನ್ನೂ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್