ಕೊಪ್ಪಳ:ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಮೆರೆದಿರುವ ಬಗ್ಗೆ ವರದಿಯಾಗಿದೆ.
ಕಳೆದ ಒಂದು ವರ್ಷದಿಂದ ಈ ರೀತಿ ಅಶ್ಲೀಲ ಬರಹದ ಘಟನೆಗಳು ಕಂಡು ಬರುತ್ತಿದೆ ಎಂದು ಹೇಳಲಾಗಿದೆ. ಜುಲೈ 10 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಶನಿವಾರ ಮತ್ತೆ ಕಿಡಿಗೇಡಿಗಳು ಕನಕಗಿರಿ ಜೂನಿಯರ್ ಕಾಲೇಜು ಗೋಡೆ ಮೇಲೆ ಅಶ್ಲೀಲ ಬರಹದ ಮೂಲಕ ವಿಕೃತಿ ಹೊರ ಹಾಕಿದ ಬಗ್ಗೆ ವರದಿಯಾಗಿದೆ.
ಕಾಲೇಜು ಹೊರ ಗೋಡೆ ಮೇಲೆ ಆರೋಪಿಗಳು ಅಪ್ರಾಪ್ತ ಬಾಲಕಿಯರ ಹೆಸರಿನೊಂದಿಗೆ ಅಸಹ್ಯವಾಗಿ ನಿಂದಿಸಿದ್ದಾರೆ. ಅವರ ಹೆಸರಿನ ಮುಂದೆ ಯುವಕರ ಹೆಸರು ಬರೆದಿದ್ದರೆ, ಇನ್ನು ಕೆಲ ಹೆಸರಿನ ಮುಂದೆ ಶಾಲೆ ಶಿಕ್ಷಕರ ಹೆಸರು ಬರೆದು ವಿಕೃತಿ ಮೆರೆದಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.