ಪುತ್ತೂರು; ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಕುಂಬ್ರದ ಜರತ್ತಾರಿನಲ್ಲಿ ನಡೆದಿದೆ.
ಜರತ್ತಾರಿನ ಆನಂದ ಎಂಬವರ ಮಗ ರಿತೇಶ್(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ರಿತೇಶ್ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರ ಮನೆಯವರಿಗೆ ತಿಳಿದು ಬಂದು ಮನೆಯ ಸಮೀಪದ ಗುಡ್ಡದಲ್ಲಿ ಹೋಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಿತೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣ ಅವರನ್ನು ಇಳಿಸಿ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಡಿದ್ದಾರೆ ಎನ್ನಲಾಗಿದೆ.ರಿತೇಶ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.