ಮದರಸಾ ಶಿಕ್ಷಕ ಸೇರಿ ಒಂದೇ ಮನೆಯ ನಾಲ್ವರು ದುರ್ಮರಣ; ಚಳಿಗೆ ಹಾಕಿದ್ದ ಹೀಟರ್ ನಿಂದ ಸಂಭವಿಸಿದ ದುರಂತ

ಸೀತಾಪುರ; ಚಳಿ ತಡೆಯಲು ಹೀಟರ್ ಹಾಕಿಕೊಂಡು ಮಲಗಿದ್ದ ದಂಪತಿ ಮತ್ತು ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಿಸ್ವಾನ್ ಪ್ರದೇಶದಲ್ಲಿ ನಡೆದಿದೆ.

ಮದ್ರಸಾ ಶಿಕ್ಷಕ 32 ವರ್ಷದ ಆಸಿಫ್, ಅವರ ಪತ್ನಿ 30 ವರ್ಷದ ಶಗುಫ್ತಾ ಮತ್ತು ಅವರ ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತಪಟ್ಟಿದ್ದಾರೆ.

ರಾತ್ರಿ ಆಸಿಫ್ ಹಾಗೂ ಆತನ ಕುಟುಂಬ ತೀವ್ರ ಚಳಿಯ ನಡುವೆ ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿದ್ದು, ಇದರಿಂದ ಉಸಿರುಗಟ್ಟಿ ಇಡೀ ಕುಟುಂಬ ಸಾವನ್ನಪ್ಪಿದೆ ಎಂದು ಪೊಲೀಸ್ ಅಧಿಕಾರಿ ಬಿಸ್ವಾ ಅಭಿಷೇಕ್ ಪ್ರತಾಪ್ ತಿಳಿಸಿದ್ದಾರೆ.

ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತಲುಪಿದಾಗ ಮನೆಯಲ್ಲಿ ಎಲ್ಲರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿದೆ.
ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ದೃಢಪಡಿಸಲಾಗಿದೆ.

ಟಾಪ್ ನ್ಯೂಸ್